ಇಪ್ಪತ್ತು ನಿಮಿಷದಲ್ಲಿ ಟೊಮ್ಯಾಟೊ ಬಾತ್ ಮಾಡಬಹುದು ಎಂದರೆ ನಂಬುತ್ತೀರಾ? ನಿಮ್ಮ ಟ್ರಡಿಶನಲ್ ಪಲಾವ್ ಅಥವಾ ಟೊಮ್ಯಾಟೋ ಬಾತ್ ರೆಸಿಪಿಯ ಜೊತೆಗೆ ಈ ಈಸಿ ಟೊಮ್ಯಾಟೊ ಬಾತ್ ರೆಸಿಪಿ ನಿಮ್ಮ ಜೊತೆ ಇದ್ದರೆ ಈಸಿಯಾಗಿ ಯಾವಾಗ ಬೇಕೆಂದರೆ ಆವಾಗ ಮಾಡಬಹುದು. ಯಾರಾದರೂ ಸಡನ್ ಆಗಿ ಮನೆಗೆ ಬಂದರೆ ತರಕಾರಿಯೂ ಇಲ್ಲದಿದ್ದರೆ ಏನು ಮಾಡುವುದು ಎಂದು ಚಿಂತಿಸುವ ಅಗತ್ಯ ಇಲ್ಲ. ಮಿಕ್ಸಿ ಇಲ್ಲದೆ ಸುಲಭವಾಗಿ ಟೊಮ್ಯಾಟೊ ಬಾತ್ ಮಾಡುವ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
- ಎಣ್ಣೆ
- ಈರುಳ್ಳಿ ಎರಡು
- ಟೊಮ್ಯಾಟೊ ನಾಲ್ಕು
- ಹಸಿಮೆಣಸು ಹತ್ತು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಚಕ್ಕೆ
- ಲವಂಗ
- ಮರಾಠಿ ಮೊಗ್ಗು
- ಅಕ್ಕಿ
- ಪಲಾವ್ ಎಲೆ
ಮಾಡುವ ವಿಧಾನ - ಮೊದಲಿಗೆ ಕುಕ್ಕರ್ಗೆ ಎಣ್ಣೆ ಹಾಕಿ,ಸಾಸಿವೆ ಹಾಕಿದ ನಂತರ ಮಸಾಲೆ ಪದಾರ್ಥಗಳನ್ನು ಹಾಕಿ
ಅದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ - ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
- ಇದಕ್ಕೆ ಟೊಮ್ಯಾಟೋ ಹಾಕಿ ಅರಿಶಿಣ,ಉಪ್ಪು ಹಾಕಿ, ಪಲಾವ್ ಮಸಾಲಾ, ಬಿರಿಯಾನಿ ಮಸಾಲಾ ಹಾಕಿ ಇದು ಬೇಕೆಂದರೆ ಮಾತ್ರ.
- ಇಷ್ಟು ಆದ ನಂತರ ನೀರಲ್ಲಿ ನೆನೆಸಿದ ಅಕ್ಕಿ ಹಾಕಿ ಬಾಡಿಸಿ
- ನಂತರ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ, ಸ್ವಲ್ಪ ತುಪ್ಪ ಹಾಕಿ ಕುಕ್ಕರ್ ಮುಚ್ಚಿ