spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಮಿತ್ರತ್ವ ವಲ್ಲ- ಇದು ಚೀನಾ ಅಸಹನೀಯ ಮಾತ್ಸರ್ಯ: ಆತ್ಮ ನಿರ್ಭರತೆ ಸಹಿಸದ ಡ್ರ್ಯಾಗನ್ ಹೊಟ್ಟೆಯಲ್ಲಿ ಕಿಚ್ಚು!

ಸುದ್ದಿ ವಿಶ್ಲೇಷಣೆ: ಪಿ. ರಾಜೇಂದ್ರ

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ತರುವಾಯ ಪಾಕ್ ಗಡಿಯಲ್ಲಿ ಉಗ್ರರ ಉಪಟಳ ತುಸು ಕಡಿಮೆಯಾಯಿತು. ದಿನಬೆಳಗಾದರೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಸಿಡಿತ , ಸಾರ್ವತ್ರಿಕ ಆಸ್ತಿಪಾಸ್ತಿ ಹಾನಿಗೊಳಿಸುವಂತಹ ದುಷ್ಕೃತ್ಯಗಳು ಇಲ್ಲಿ ನಿರಂತರವಾಗಿ ನಡೆಯುತಿದ್ದನ್ನು ಭಾರತ ಸರ್ಕಾರ ಪ್ರಯತ್ನಪೂರ್ವಕವಾಗಿ ತಡೆಯಿತು. ಇದರಿಂದ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದ್ದು ಪಾಕಿಸ್ಥಾನಕ್ಕೆ ! ವಿಶೇಷ ಸ್ಥಾನಮಾನ ರದ್ದಾದ ಆರಂಭದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿರುದ್ಧ ಧ್ವನಿ ಎತ್ತಿದರೂ ಅದಕ್ಕೆ ವಿಶ್ವಸಂಸ್ಥೆಯಾಗಲೀ, ಬ್ರಿಟನ್, ಅಮೆರಿಕವಾಗಲಿ ಸೊಪ್ಪು ಹಾಕಲಿಲ್ಲ. ಗಡಿ ಮೂಲಕ ಇಸ್ಲಾಮಿಕ್ ಉಗ್ರರನ್ನು ಭಾರತಕ್ಕೆ ಕಳ್ಳಮಾರ್ಗದಲ್ಲಿ ಎಕ್ಸ್‌ಪೋರ್ಟ್ ಮಾಡುತ್ತಿದ್ದ ಪಾಕ್ ಒಳಗೊಳಗೆ ಬೆಂದು ಬೆಂಡಾಗಿದ್ದು ಕಟುಸತ್ಯ.
ಕಳೆದ ಒಂದು ವರ್ಷದ ಅವಯಲ್ಲಿ ಹೆಚ್ಚೂ ಕಡಿಮೆ ಭಾರತ- ಪಾಕ್ ಗಡಿಯಲ್ಲಿ ವ್ಯಾಪಕ ಗುಂಡಿನ ಸದ್ದು ಅಡಗಿದೆ. ಆದರೆ ಚೀನಾ ಗಡಿಯಲ್ಲಿ ಉದ್ವಿಗ್ನತೆ ಶುರುವಾಗಿದೆ. ಭಾರತದ ವಿರುದ್ಧ ಚೀನಾ ಈಗೇಕೆ ಕೆಂಡ ಕಾರುತ್ತಿದೆ ? ಇದಕ್ಕೆ ಕೆಲ ಪ್ರಮುಖ ಕಾರಣಗಳಿವೆ.
ಒಂದು : ಭಾರತದ ಅಭಿವೃದ್ಧಿ ಚೀನಾ ಮಾರುಕಟ್ಟೆಗೆ ಒಂದು ದೊಡ್ಡ ಸವಾಲು.
ಎರಡು: ಭಾರತೀಯ ಸೈನಿಕರ ಮೇಲೆ ಮುಗಿಬಿದ್ದ ಚೀನಾ ದುರಾಕ್ರಮಣಕ್ಕೆ ಭಾರತ ಕೂಡಲೇ ವ್ಯಾಪಕ ಪ್ರತಿದಾಳಿ ನಡೆಸಲಿಲ್ಲ. ಇದರ ಬದಲಾಗಿ , ಭಾರತೀಯ ಮಾರುಕಟ್ಟೆಯನ್ನೇ ನೆಚ್ಚಿ ತನ್ನ ಕೈಗಾರಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡ ಡ್ರಾಗನ್ ದೇಶಕ್ಕೆ ಭಾರತ ಮರ್ಮಾಘಾತ ನೀಡಿತು. ಪ್ರಪಂಚದ ಎಲ್ಲ ಮುಂದುವರಿದ ದೇಶಗಳ ದೊಡ್ಡ ಮಾರುಕಟ್ಟೆಯೇ ಭಾರತ. ಕಳೆದ ಆರು ತಿಂಗಳ ಅವಧಿ ಯಲ್ಲಿ ಚೀನಾ ಮಾರುಕಟ್ಟೆ ಮತ್ತು ಆರ್ಥಿಕತೆ ಪಾತಾಳದಂಚು ಸೇರಿದೆ. ಕೊರೋನಾ ಹೆಮ್ಮಾರಿ ಹರಡುವಿಕೆಯ ವಿಚಾರದಲ್ಲಿ ಈ ದೇಶ ಅಪ್ರಾಮಾಣಿಕವಾಗಿ ನಡೆದುಕೊಂಡಿರುವುದು ಭಾರತಕ್ಕೂ ಅಪಥ್ಯ . ಮಿಗಿಲಾಗಿ ಇಂದು ಚೀನೀ ತಯಾರಿತ ಔಷ, ಆಹಾರ, ಆಟಿಕೆ, ಆಟೋಮೊಬೈಲ್ ಅಥವಾ ಆಪ್ , ಇವೆಲ್ಲವೂ ಬ್ಯಾನ್ ಆದ ಮೇಲೆ ಈ ದೇಶದ ಮಾನಸಿಕ ಪರಿಸ್ಥಿತಿ ಆಂದೋಳನಕರವಾಗಿದೆ . ಹೇಗಾದರೂ ಸರಿ. ಭಾರತಕ್ಕೆ ಒಂದಷ್ಟು ತೊಂದರೆಗಳನ್ನು ತೊಂದೊಡ್ಡಬೇಕು . ಇದು ಪ್ರಸ್ತುತ ಚೀನಾ ತಾಳಿದ ವಿಕೃತ ಧೋರಣೆ ! ಪಾಕ್ ನಡೆದ ಕೆಟ್ಟ ಹಾದಿಯಲ್ಲಿಯೇ ಚೀನಾ ಕೂಡಾ ತನ್ನ ಪಾದವನ್ನು ಬೆಳೆಸಿರುವುದು ದುರದೃಷ್ಟಕರ .
ಎರಡು ವಾರಗಳ ಹಿಂದೆ ಭಾರತದಲ್ಲಿರುವ ಚೀ ನೀ ರಾಯ ಭಾರಿ ವಿಡಾಂಗ್ ಹೇಳಿದ್ದ ಮಾತುಗಳು ಇಲ್ಲಿ ಉಲ್ಲೇಖನೀಯ : ಅಭಿವೃದ್ಧಿಯಲ್ಲಿ ಭಾರತ ಎಂದೂ ಚೀನಾಗೆ ಪೈಪೋಟಿ ದೇಶವಲ್ಲ . ಮಿತ್ರ ದೇಶ . ಈ ದಿಶೆಯಲ್ಲಿ ಭಾರತ ಹಾಗೂ ಚೀನಾ ನಡುವಣ ಸಂಬಂಧ ಸೌಹಾರ್ದಯುತವಾಗಿರಲು ಚೀನಾ ಬಯಸುತ್ತೆ. ಸೋಜಿಗವೆಂದರೆ ಚೀನಾ ರಾಯಭಾರಿ ಈ ಹೇಳಿಕೆಯನ್ನು ನೀಡಿದ ಮೂರೇ ದಿನಗಳ ಅವಯೊಳಗೆ ಲಡಾಕ್ ಬಳಿ ಸೇನೆ ಜಮಾಯಿಸಿ ದುರಾಕ್ರಮಣಕ್ಕೆ ಮುಂದಾಗಿದ್ದು . ಒಂದು ಗಡಿಯಲ್ಲಿ ಉದ್ವಿಗ್ನತೆ. ಮತ್ತೊಂದು ಕಡೆ ಚೀನಾ ಬಾಯಿಂದ ಮಾತುಕತೆಯ ಮಂತ್ರ ! ಇಂತಹ ಇಬ್ಬಗೆಯ ನೀತಿಯಿಂದ ಗಡಿಯಲ್ಲಿ ಶಾಂತಿ ಕಾಪಾಡುವುದು ಸಾಧ್ಯವೇ ? ಒಟ್ಟಿನಲ್ಲಿ ಚೀನಾ ಈಗ ಬಹಳವಾಗಿ ಹೆದರಿರುವುದು ಭಾರತದ ಮಿಂಚಿನ ವೇಗದ ಸ್ವಾವಲಂಬಿ ಬೆಳವಣಿಗೆಗೆ . ಭಾರತದಲ್ಲಿ ಚೀನಾದಲ್ಲಿ ತಯಾರಾಗುವ ಎಲ್ಲ ವಸ್ತುಗಳೂ ಉತ್ಪಾದನೆಯಾಗಿಬಿಟ್ಟರೆ ತಾನು ದಿವಾಳಿಯಾಗುವುದಂತೂ ಖಂಡಿತ. ಇದರ ಒಳಬೇಗುದಿಯ ಸ್ಪೋಟವೇ ಗಡಿ ತಂಟೆಗೆ ಕಾರಣ. ಚೀನಾ ದೇಶದ್ದು ಈಗ ಕೈಲಾಗದವನು ಮೈ ಪರಚಿಕೊಂಡ ಪರಿಸ್ಥಿತಿ ಎಂದರೆ ಅತಿಶಯವಲ್ಲ.

 ಚೀನಾ ಉತ್ಪಾದಿತ ಬಹುತೇಕ ವಸ್ತುಗಳಿಗೆ ಭಾರತೀಯ ಮಾರುಕಟ್ಟೆ ಬಾಗಿಲು ಮುಚ್ಚಿದೆ . ಕೊರೋನಾ ನಂತರ ಭಾರತ ಉತ್ಪಾದನಾ ರಂಗದಲ್ಲಿ ಮೈ ಕೊಡವಿದೆ. ಆದರೆ ಹತಾಶ ಸ್ಥಿತಿಯಲ್ಲಿರುವ ಚೀನಾದಲ್ಲಿ ಆರ್ಥಿಕ ದಿವಾಳಿತನದ ದುರ್ದಿನಗಳು ಶುರುವಾಗಿವೆ.

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap