ಹೊಸದಿಗಂತ ಆನ್ ಲೈನ್ ಡೆಸ್ಕ್:
ತಡೆಗೋಡೆ ಕುಸಿದು ಇಬ್ಬರು ಯೋಧರು ಹುತಾತ್ಮರಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಮಚ್ಚೆಡಿ ಜಿಲ್ಲೆಯ ಮಿಲಿಟರಿ ಬ್ಯಾರಾಕ್ ನಲ್ಲಿ ನಡೆದಿದೆ.
ಬಿಲ್ಲಾವಾರ್ ಪೊಲೀಸ್ ಠಾಣೆಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಬ್ಯಾರಕ್ ನಲ್ಲಿ ಗೋಡೆ ಕುಸಿತವಾಗಿದೆ. ಯೋಧರು ಬ್ಯಾರಕ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮೂವರು ಯೋಧರಿಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮತ್ತೋರ್ವ ಯೋಧ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಜಿಲ್ಲಾಡಳಿತ ತಿಳಿಸಿದೆ.
ಹುತಾತ್ಮ ಯೋಧರನ್ನು ಸೋನಿಪತ್ ನ ಸುಬೇದರ್ ಎಸ್ ಎನ್ ಸಿಂಗ್ ಹಾಗೂ ಸಾಂಬಾದ ನಾಯಕ್ ಪರ್ವೇಝ್ ಕುಮಾರ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಮತ್ತೊ ಯೋಧ ಸೆಪೊಯ್ ಮಂಗಲ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.