ಹೊಸ ದಿಗಂತ ವರದಿ, ಮೈಸೂರು:
ಮೀಟರ್ ಬಡ್ಡಿಯವರ ಕಿರುಕುಳ ತಾಳಲಾರದೆ ಇನ್ಫೋಸಿಸ್ನಲ್ಲಿ ಕೆಲಸ ಮಾಡುತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆಆರ್ ಠಾಣೆ ವ್ಯಾಪ್ತಿಗೆ ಕೆಆರ್ ಮೊಹಲ್ಲಾದ ಸೀತಾರಾಮರಾವ್ ರಸ್ತೆಯ ನಿವಾಸಿ ಗಗನ್ (23) ಸಾವನ್ನಪ್ಪಿದ ಯುವಕ. ಈತ ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದು, ಜಯಂತ್, ಹರ್ಷ, ಪ್ರಕಾಶ್ ಮತ್ತು ತಂಗವೇಲು ಎಂಬುವರಿAದ ಸಾಲ ಪಡೆದಿದ್ದ. ಆದರೆ ಈತ ಪಡೆದ ಸಾಲಕ್ಕೆ ಸಾಲ ನೀಡಿದವರು ಹೆಚ್ಚಿನ ಬಡ್ಡಿ ವಿಧಿಸಿದ್ದಲ್ಲದೆ, ಬಡ್ಡಿ ಕೊಡದ ಕಾರಣ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರು. ಇದರಿಂದ ಮನನೊಂದ ಗಗನ್ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ತಮ್ಮ ಮಗ ನಾಲ್ಕು ಜನ ಮೀಟರ್ ಬಡ್ಡಿಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗಗನ್ ತಂದೆ ಕೆಆರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.