Saturday, August 13, 2022

Latest Posts

ಮೀನುಗಾರಿಕೆ ಇಲಾಖೆ ಸೌಲತ್ತು ಆಂಧ್ರದವರ ಪಾಲು; ಅಧಿಕಾರಿಗಳು ಮದ್ಯವರ್ತಿಗಳು ಶಾಮೀಲು: ಭೀಮುನಾಯಕ ಆರೋಪ

ಯಾದಗಿರಿ : ಜಿಲ್ಲೆಯ ಮೀನುಗಾರಿಕೆ ಇಲಾಖೆಗೆ ಕೇಂದ್ರ,ರಾಜ್ಯ ಸರ್ಕಾರದಿಂದ ಬರುವ ಎಸ್.ಸಿ.ಪಿ,ಟಿ.ಎಸ್.ಪಿ. ಮತ್ತು ಸಾಮಾನ್ಯ ಯೋಜನೆಯಡಿ ಸ್ಥಳೀಯ ಜಿಲ್ಲೆಯ ಫಲಾನುಭವಿಗಳಿಗೆ ಸಹಾಯ ಧನ ಸ್ಥಳೀಯರಿಗೆ ನೀಡದೇ ಆಂಧ್ರ ಮೂಲದವರಿಗೆ ನೀಡಿ, ತಾರತಮ್ಯ ಮಾಡಿದ್ದು, ಮತ್ತು ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಮಂಗಳವಾರ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕಾರ್ಯಕರ್ತರು ಮೀನುಗಾರಿಕೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮುನಾಯಕ, ಯಾದಗಿರಿ ಜಿಲ್ಲೆಯ ಮೀನುಗಾರಿಕೆ ಇಲಾಖೆಗೆ ಕೇಂದ್ರ,ರಾಜ್ಯ ಸರ್ಕಾರದಿಂದ ಬರುವ ಎಸ್.ಸಿ.ಪಿ,ಟಿ.ಎಸ್.ಪಿ. & ಸಾಮಾನ್ಯ ಯೋಜನೆಯಡಿ ನೀಡುವ ಸಹಾಯ ಧನವನ್ನು ನಿಯಮಾನುಸಾರ ಸ್ಥಳೀಯ ಜಿಲ್ಲೆಯ ಮೂಲತ: ಬಡ ಮೀನುಗಾರಿಕೆ ವೃತ್ತಿ ಮಾಡುವ ಫಲಾನುಭವಿಗಳಿಗೆ ಆಯ್ಕೆ ಮಾಡಬೇಕು. ಆದರೆ ಸದರಿ ಇಲಾಖೆಯ ಅಧಿಕಾರಿಗಳು ಆಂಧ್ರ ಮೂಲದ ಮದ್ಯವರ್ತಿಯಾದ ಗಂಗಾರಾಜ್ ಎಂಬುವವನೊoದಿಗೆ ಶಾಮೀಲಾಗಿ, ಈ ಆಂಧ್ರದ ಗಂಗಾರಾಜ್‌ನೇ ಎಲ್ಲಾ ಸಂಬoಧಪಟ್ಟ ದಾಖಲಾತಿಗಳು ತಯಾರಿಸಿ, ಇಲಾಖೆಗೆ ಶಿಫಾರಸ್ಸು ಮಾಡಿ ಹೊರ ರಾಜ್ಯ ಆಂಧ್ರದ ಫಲಾನುಭವಿಗಳ ಪಟ್ಟಿ ನೀಡಿ ಇಲಾಖೆಗೆ ಸಲ್ಲಿಸುತ್ತಾನೆ. ಆತ ನೀಡಿದ ಪಟ್ಟ್ಟಿಯನ್ನೆ ಇಲಾಖೆಯ ಅಧಿಕಾರಿಗಳು ಆಯ್ಕೆ ಮಾಡಿ, ಅನುಮೋದನೆಗೆ ಕಳಿಸುತ್ತಾರೆ.
ಈ ಮಧ್ಯವರ್ತಿ ಗಂಗಾರಾಜ್‌ನು ತನಗೆ ಬೇಕಾದ ಸ್ಥಳೀಯರಿಂದ ಅಗ್ರಿಮೆಂಟ್ ಮಾಡಿಕೊಂಡು ಫಲಾನುಭವಿಗಳಿಗೆ ಅಲ್ಪ-ಸ್ವಲ್ಪ ಹಣ ನೀಡಿ ಪೂರ್ತಿ ಹಣ ತಾನೇ ಬಳಸಿಕೊಂಡು, ಇಲಾಖೆಯ ಅಧಿಕಾರಿಗಳಿಗೆ ನೀಡಿ, ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬoದಿದೆ ಎಂದು ಆರೋಪಿಸಿದರು.
ಸ್ಥಳೀಯ ಜಿಲ್ಲೆಯ ಫಲಾನುಭವಿಗಳಿಗೆ ಸಹಾಯ ಧನ ಸ್ಥಳೀಯರಿಗೆ ನೀಡದೇ ಆಂಧ್ರ ಮೂಲದವರಿಗೆ ಸಹಾಯ ಧನ ನೀಡಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಾರತಮ್ಯ ಮಾಡಿದ್ದು, ಅಧಿಕಾರಿಗಳು ಸದರಿ ಮಧ್ಯವರ್ತಿ ಆಂಧ್ರದ ಗಂಗಾರಾಜ್‌ನ ಮತ್ತು ಇತರೆ ಮದ್ಯವರ್ತಿಗಳ ಆಮೀಷಕ್ಕೆ ಒಳಗಾಗಿರುತ್ತಾರೆ.
ಆದ್ದರಿಂದ ಕೇಂದ್ರ, ಸರ್ಕಾರದ ಸಹಾಯ ಧನ ಸ್ಥಳೀಯರಿಗೆ ನೀಡದೇ ಕಾನೂನು ಬಾಹಿರವಾಗಿ ಆಯ್ಕೆ ಮಾಡಿ ಅವ್ಯವಹಾರ ಎಸಗಿರುವ ಹಿರಿಯ ಅಧಿಕಾರಿಗಳು ಮತ್ತು ಆಂಧ್ರದ ಮಧ್ಯವರ್ತಿ ಗಂಗಾರಾಜ್‌ನ ಮತ್ತು ಇತರೆ ಸಹಾಯ ಧನ ಪಡೆದುಕೊಂಡ ಆಂಧ್ರ ಮೂಲದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಸಮಗ್ರ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ತೇಜರಾಜ್ ರಾಠೋಡ, ರಾಜು ಚವ್ಹಾಣ, ಸಿದ್ದಪ್ಪ ಕ್ಯಾಸಪ್ಪನಳ್ಳಿ, ಸಾಹೇಬಗೌಡ ನಾಯಕ, ಕಾಶಿನಾಥ ನಾನೇಕ, ಶರಣು ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss