ಹೊಸ ದಿಗಂತ ವರದಿ, ಕಲಬುರಗಿ:
ಕಲಬುರಗಿಯ ಶರಣಬಸವೇಶ್ವರ ಅಪ್ಪನ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ 16 ವಷ೯ದ ಬಾಲಕ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಸಾಯಂಕಾಲ 5 ಗಂಟೆಗೆ ಸಂಭವಿಸಿದೆ.
ಇಬ್ಬರು ಬಾಲಕರು ಮೀನು ಹಿಡಿಯಲು ನೀರಿಗಿಳಿದಿದ್ದರು ಎನ್ನಲಾಗಗುತ್ತಿದೆ. ಓರ್ವ ಬಾಲಕ ನೀರಿನಲ್ಲಿ ಮುಳುಗುತ್ತಿದ್ದಂತೆಯೇ
ಮತ್ತೋರ್ವ ಬಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕ ಮುಳುಗುತ್ತಿರೋದನ್ನು ನೋಡಿ ರಕ್ಷಿಸಲು ಸ್ಥಳೀಯರು ಯತ್ನಿಸಿದರು, ಆದರೆ ಕೊನೆಗೆ ನೀರಿನಲ್ಲಿ ಮುಳುಗಡೆಯಾಗಿ ಬಾಲಕ ಸಾವಿಗಿಡಾಗಿದ್ದಾನೆ.
ನಂತರ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಎಸ್.ಡಿ.ಆರ್.ಎಫ್ ತಂಡದವರಿಂದ ಶವವನ್ನು ಪತ್ತೆ ಮಾಡಿ ಹೊರ ತೆಗೆದಿದ್ದಾರೆ.
ಬಾಲಕನ ಗುರುತು ಪತ್ತೆಯಾಗಿಲ್ಲ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ಸ್ಥಳದಲ್ಲಿ ಪಾಲಿಕೆಯ ಇಂಜಿನಿಯರ ರವಿ ಚವ್ಹಾಹ. ಅಗ್ನಿಶಾಮಕ ಹಾಗೂ ಎಸ್ ಡೀ ಆರ್ ಎಫ್ ತಂಡದ
ಮಚ್ಚೇಂದ್ರನಾಥ ಸಂಜನಕರ್,ವಾಲ್ಮೀಕಿ, ಗಬ್ಬರಸಿಂಗ್, ಶಂಕರಲಿಂಗ್, ವಿನೋದ್, ಖಲೀಲ್, ಚಂದು, ಪ್ರಮೋದ ತಂಡ ಜೊತೆ ಗೂಡಿ ಶವವನ್ನು ಹೊರತೆಗೆಯಲಾಗಿದೆ.