Thursday, August 18, 2022

Latest Posts

ಮುಂಗಾರು ಆಗಮನದ ಲಕ್ಷಣ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ಚುರುಕು

ಕುಶಾಲನಗರ: ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಆಗಮನದ ಲಕ್ಷಣಗಳು ಗೋಚರಿಸತೊಡಗಿದ್ದು, ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ.
ಅರೆ ಮಲೆನಾಡು ಪ್ರದೇಶವಾದ ಕುಶಾಲನಗರ ಹೋಬಳಿ ವ್ಯಾಪ್ತಿಯ ತೂರೆನೂರು ಶಿರಂಗಾಲ, ಹೆಬ್ಬಾಲೆ ಮಳೆ ಅವಲಂಬಿತ ಪ್ರದೇಶವಾಗಿದ್ದು, ಕಳೆದ ತಿಂಗಳು ಬಿದ್ದ ಮಳೆಯಲ್ಲಿ ಭೂಮಿಯನ್ನು ಉಳುಮೆ ಮಾಡಿ ಸಿದ್ಧ ಮಾಡಿಕೊಂಡಿದ್ದರು. ಇದೀಗ ಕಳೆದ ಎರಡು ದಿನಗಳಿಂದ ಬಿತ್ತನೆಗೆ ಅನುಕೂಲವಾಗುವಂತೆ ಮಳೆ ಬಿದ್ದಿದೆ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ ಹೆಬ್ಬಾಲೆ ತೂರೆನೂರು ಅಳುವಾರ ಸಿದ್ದಲಿಂಗಪುರ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯನ್ನು ಬೆಳೆಯಲು ಸಿದ್ದ ವಾಗಿ ಇಂದಿನಿಂದ ಜೋಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಭೂಮಿಯನ್ನು ಉಳುಮೆ ಮಾಡಿ ಮೊದಲು ಜೋಳ ಹಾಗುವ ಮುನ್ನ ಸಾಲಗಳಿಗೆ ರಾಸಾಯನಿಕ, ಸಾವಯವ ಗೊಬ್ಬರವನ್ನು ಹಾಕಿ ನಂತರ ಮಣ್ಣಿನ ಅದ್ಯತೆಯ ಅನುಗುಣವಾಗಿ ಹೈಬ್ರೀಡ್ ಕಂಪನಿಯ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ.
ಮಳೆಯ ಅಧಾರಿತ ಬೆಳೆಯದ ಮುಸುಕಿನ ಜೋಳ ಅವರ ಭೂಮಿಯ ಮೇಲಿನ ಫಲವತ್ತಾತೆಯ ಅನುಸಾರವಾಗಿ ಉತ್ತಮ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!