Thursday, August 11, 2022

Latest Posts

ಮುಂಗಾರು ಬಿತ್ತನೆಗೆ ಲಾಕ್ ಡೌನ್ ಅಡ್ಡಗಾಲು: ಬೀಜೋಪಚಾರಗಳ ಖರೀದಿಗೆ ಸಡಿಲಗೊಳಿಸಲು ಆಗ್ರಹ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭಗೊoಡಿದ್ದು, ರೈತರು ತಮ್ಮ ಹೊಲಗದ್ದೆಗಳನ್ನು ಹದಗೊಳಸಿಕೊಂಡು ಬಿತ್ತನೆಗೆ ಮುಂದಾಗಿದ್ದಾರೆ. ಬೀಜ ರಸಗೊಬ್ಬರ, ಕಾಳು ಕಡಿಗಳ ಖರಿದೀ ಜೋರಾಗುತ್ತಿದ್ದು, ದಿನಬೇಳಗಾದರೆ ತಡ ಶಹಾಪುರ ನಗರದಲ್ಲಿ ರಸಗೊಬ್ಬರ ಪರ್ಟಿಲೈಜರ್ ದುಖಾನುಗಳ ಮುಂದೆ, ರೈತರು ಕಿಕ್ಕಿರಿದು ನಿಂತಿರುತ್ತಾರೆ.
ಅಲ್ಲದೆ ತಮಗೆ ಬೇಕಾಗುವ ಸಲಕರಣೆಗಳನ್ನು ಖರಿದಿಸಿಕೊಳ್ಳಲು ಸಂಜೆಯಾಗುತ್ತಿದೆ. ಈಲ್ಲಾಡಳಿತ 5 ಗಂಟೆಯವರಿಗೆ ಅವಕಾಶ ನೀಡಿದ್ದು ಶಹಾಪುರ ನಗರದಲ್ಲಿ ಲಾಕ್ ಡೌನ್ ಜಾರಿಯಾಗುತ್ತಿದೆ. ಇನ್ನೂ ಬಿತ್ತನೆಗಾಗಿ ಬೇಕಾಗುವ ಸಾಮಾನುಗಳನ್ನು ಪಡೆಯುವದರಲ್ಲೆ ಈ ಲಾಕ್ ಡೌನ್ ರೈತರ ಪಾಲಿಗೆ ಅಡ್ಡಗಾಲು ಆಗುತ್ತಿದೆ. ಇದರಿಂದಾಗಿ ಮಾರನೇಯ ತಮ್ಮ ದೈನಂದಿನ ಹೊಲಮನೆಗಳ ಕೆಲಸಗಳನ್ನು ಬದಿಗೊತ್ತಿ ಶಹಾಪುರ ನಗರಕ್ಕೆ ಬಂದು ರಸಗೊಬ್ಬರಗಳನ್ನು ಖರೀದಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ರೈತರ ಸಾಮಗ್ರಿಗಳ ಖರೀದಿಗಾಗಿ ಈಗಿರುವ ಸಮಯವನ್ನು ವಿಸ್ತರಿಸಿಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ರಸಗೊಬ್ಬರ ಮತ್ತು ಪರ್ಟಿಲೈಜರ ದುಖಾನುಗಳಿಗಾಗಿ ಸಂಜೆಯವರೆಗೂ ಸಮಯ ನೀಡಬೇಕು. ಇಲ್ಲವಾದಲ್ಲಿ ಮುಂಗಾರು ಬಿತ್ತನೆಯ ಸಮಯದಲ್ಲಿ ರೈತರು ಬೀಜ ರಸಗೊನ್ನರಕ್ಕಾಗಿ ಪಡದಾಎಉವ ಸ್ಥಿತಿ ಉದ್ಭವಿಸುತ್ತಿದೆ ಎಂದಿರು ರೈತ ಮುಖಂಡರಾದ ಮಹೇಶಗೌಡ ಸುಬೆದಾರವರು ರೈತರ ಹಿತಾಶಕ್ತಿಯನ್ನು ಗಮನಿಸಿ ಲಾಕ್‌ಡೌನ ಸಮಯವನ್ನು ಸಡೊಲಗೊಳಿಬೇಕು ಎಂದು ಮನವಿ ಮಾಡಿದ್ದಾರೆ.
ಕೀರಾಣಿ ಅಂಗಡಿಗಳು, ಮೆಡಿಕಲ್ ಅಂಗಡಿಗಳಿಗೆ ಲಾಕ್ ಡೌನ್ ಸಡಿಲಿಕೆಗೊಳಿಸಿದಂತೆ, ಅದೆ ಮಾದರಿಯಲ್ಲಿ ರೈತರಿಗಾಗಿ ಪರ್ಟಿಲೈರ‍್ಸ ಮತ್ತು ರಸಗೊಬ್ಬರ ದುಖಾನುಗಳಿಗೂ ಲಾಕ್ ನೀತಿ ಸಡಿಲಿಕೆಯಾಗಬೇಕು. ಈಗಾಗಲೆ ಜಿಲ್ಲೆಯ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಈ ಸಂಧರ್ಭದಲ್ಲೆ ಬಿತ್ತನೆ ಮಾಡಿಕೊಂಡಲ್ಲಿ, ರೈತರಿಗೆ ಅನೂಕೂಲವಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಸರ್ಕಾರ ರೈತರ ಹಿತಾಶಕ್ತಿ ಕಾಪಾಡದಿದ್ದಲ್ಲಿ, ಬಿತ್ತನೆಯಲ್ಲಿ ವಿಳಂಬವಾಗಿ ಪರದಾಡುವ ಸ್ಥಿತಿ ಉಂಟಾಗುತ್ತದೆ. ಅದಕ್ಕಾಗಿ ಜಿಲ್ಲಾಡಳಿತ ರೈತರೊಗೆ ಅನಕೂಲವಾಗುವಂತೆ ಸೂಕ್ತ ಕ್ರಮ ಜರಗಿಸಬೇಕು ಎಂಬುದು ರೈತರ ಅಭಿಮತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss