ಮುಂಡಗೋಡ: ಮನೆಯ ಹಿತ್ತಲಿನಲ್ಲಿದ್ದ ನಾಲ್ಕು ಗಂಧದ ಗಿಡಗಳನ್ನು ಕಳ್ಳರು ಕತ್ತರಿಸಿಕೊಂಡು ಹೋದ ಘಟನೆ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ.
ನ್ಯಾಸರ್ಗಿ ಮಲಬಾರ ಕಾಲೋನಿಯ ಕುಮಾರ ನ್ಯಾರ್ಗಿ ಎಂಬುವರ ಮನೆಯ ಹಿಂದೆ ಇರುವ ಗದ್ದೆಯಲ್ಲದ ಎರಡು ಗಂಧದ ಗಿಡಗಳನ್ನು ಕಳ್ಳರು ಕತ್ತರಿಸಿದ್ದಾರೆ. ಸಣ್ಣಗೆ ಮಳೆ ಬೀಳುತ್ತಿದ್ದರಿಂದ ಗಿಡ ಕತ್ತರಿಸಿದ್ದ ಶಬ್ಧ ಮನೆಯವರಿಗೆ ಕೇಳಿಲ್ಲ. ಅಲ್ಲದೇ ಗಿಡ ಕತ್ತರಿಸಿ ಅದರ ಟೊಂಗೆಗಳನ್ನು ಅಲ್ಲಿಯೇ ಸವರಿ, ಬಲಿತ ಗಿಡದ ಭಾಗವನ್ನು ಮಾತ್ರ ಒಯ್ದಿದ್ದಾರೆ. ಮಧ್ಯಾರಾತ್ರಿ ಸಮಯದಲ್ಲಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
೧೦೦-೨೦೦ಮೀಟರ್ ಅಂತರದಲ್ಲಿರುವ ಮೋಹನ ಕುಡ್ಡಿಕೇರಿ ಎಂಬುವರ ಮನೆಯ ಹೊತ್ತಲಿನಲ್ಲಿದ್ದ ಎರಡು ಗಂಧದ ಗಿಡಗಳನ್ನು ಸಹ ಕಳ್ಳರು ಕಮದ್ದೊಯ್ದಿದ್ದಾರೆ. ಒಂದೆ ಕಳ್ಳರ ತಂಡ ಎರಡೂ ಕಡೆ ಗಂಧದ ಗಿಡ ಕದ್ದಿರುವ ಸಾಧ್ಯತೆ ಹೆಚ್ಚಿದೆ ಎಂದು ಗಿಡದ ಮಾಲಿಕರು ದೂರಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಬಿದ್ದಿದ್ದ ಟೊಂಗೆ ಹಾಗೂ ಬೇರನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಾಗುವುದು ಬಾಕಿಯಿದೆ.
ತಾಲೂಕಿನಲ್ಲಿ ಗಂಧದ ಮರಕಳ್ಳರ ಕೈಚಳಕ ನಡೆಯುತ್ತಿರುವುದು ಸಾರ್ವಜನಿರಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅರಣ್ಯ ಇಲಾಖೆ ಅಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಇದಲ್ಲದೇ ಸುತ್ತಮುತ್ತಲಿರುವ ಶ್ರಿಗಂಧದ ಮರಗಳು ನೂರಾರು ಇದ್ದು ಮರಗಳ್ಳರಿಂದ್ದ ಇದನ್ನು ರಕ್ಷಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.