Monday, July 4, 2022

Latest Posts

ಮುಂದಿನ ದಿನಗಳಲ್ಲಿ ಕೊರೋನಾ ವೈರಾಣು ಅಪಾಯ: ಭಾರತೀಯ ದಾರ್ಶನಿಕರ ಎಚ್ಚರಿಕೆ ನಿಜವಾಗುತ್ತಿದೆಯೇ?

ವಿಶ್ಲೇಷಣೆ : ಪ್ರಕಾಶ್ ಇಳಂತಿಲ
ಮಂಗಳೂರು:  ಮುಂಬರುವ ದಿನಗಳಲ್ಲಿ ವೈರಾಣುಗಳ ಹಾವಳಿ ಮಾನವ ಕೋಟಿಯನ್ನು ಕಾಡಲಿದೆ.ಇದರ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂಬುದಾಗಿ ಅನೇಕ ಮಂದಿ ಭಾರತೀಯ ಚಿಂತಕರು, ದಾರ್ಶನಿಕರು, ಸಂತರು, ಜ್ಞಾನಿಗಳು ಎಚ್ಚರಿಸುತ್ತಾ ಬಂದಿರುವುದನ್ನು ನಾವು ಕಳೆದ ಕೆಲವು ವರ್ಷಗಳಲ್ಲಿ ನೋಡಿದ್ದೇವೆ. ಇದನ್ನು ತಡೆಯುವಲ್ಲಿ ನಮ್ಮ ಸಾಧು ಸಂತರು, ಜ್ಞಾನಿಗಳು ವಿವಿಧ ಯಜ್ಞಯಾಗಾದಿಗಳಲ್ಲಿ ತೊಡಗಿಕೊಂಡಿರುವುದನ್ನು ನೋಡಿದ್ದೇವೆ. ಇದೀಗ ಕೊರೊನಾ ವೈರಸ್ ಹಾವಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಇದು ಮನುಷ್ಯನಿಗೆ ಹರಡಿದ್ದು ಹೇಗೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ನಡುವೆಯೇ ಚೀನಾ ದೈನಿಕವೊಂದು ೨೦೧೮ರಲ್ಲಿ ಮಾಡಿರುವ ಟ್ವೀಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.ಇದರಂತೆ ಚೀನಾದ ಕುಖ್ಯಾತ ವುಹಾನ್‌ನಲ್ಲಿ ೧೫೦೦ಕ್ಕೂ ಹೆಚ್ಚು ವೈರಾಣುಗಳನ್ನು ರಕ್ಷಿಸಿಡಲಾಗಿದೆ ಎಂಬುದಾಗಿ ಆ ಟ್ವೀಟ್ ಹೇಳಿತ್ತು.
ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ ೧,೫೦೦ ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ ಎಂದು ಚೀನಾ ಡೈಲಿ ೨೦೧೮ರ ಮೇ ೨೯ ಬೆಳಗ್ಗೆ ೫:೪೫ ಕ್ಕೆ ಟ್ವೀಟ್ ಮಾಡಿತ್ತು.ಇದೇ ವುಹಾನ್‌ನಿಂದ ಕೊರೋನಾ ವೈರಸ್ ಇಂದು ವಿಶ್ವವ್ಯಾಪಿ ಹರಡಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡು ದೇಶಗಳ ಜನಜೀವನವನ್ನೇ ಉಧ್ವಸ್ತಗೊಳಿಸಿರುವುದು.
ಈ ಹಿನ್ನೆಲೆಯಲ್ಲೇ ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೊರೋನಾ ವೈರಸ್ ವುಹಾನ್‌ನಲ್ಲಿರುವ ಹಸಿ ಮಾಂಸ ಮಾರುಕಟ್ಟೆಯಿಂದ  ಮನುಷ್ಯನಿಗೆ ಹರಡಿದೆ  ಎಂಬುದಾಗಿ ಹೇಳಲಾಗುತ್ತಿದೆ. ಇದೇ ವೇಳೆ,ಇದು ಚೀನಾ ಜೈವಿಕ ಅಸ್ತ್ರ ಪರೀಕ್ಷೆಯ ವೇಳೆ ನಡೆದ ಸೋರಿಕೆ. ಚೀನಾದ ವೈರಾಲಾಜಿ ಲ್ಯಾಬ್‌ನಿಂದ ಈ ವೈರಸ್ ಸೋರಿಕೆಯಾಗಿದೆ ಎಂಬ ವಾದವೂ ಇನ್ನೊಂದೆಡೆ ಕೇಳಿಬಂದಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕೊರೋನಾ ವೈರಸ್‌ನ್ನನು ಚೈನೀಸ್ ವೈರಸ್ ಎಂದು ಕರೆದಿರುವುದು ಚೀನಾಕ್ಕೆ ತೀವ್ರ ಕಿರಿಕ್ ಎನಿಸಿ ಚೀನಾದ ಆಕ್ಷೇಪಕ್ಕೂ ಕಾರಣವಾಗಿತ್ತು.ಇದಕ್ಕೆ ಪ್ರತಿಯಾಗಿ ಅಮೆರಿಕದ ಸೈನಿಕರೇ ವುಹಾನ್‌ನಲ್ಲಿ ವೈರಸ್ ಬಿಟ್ಟಿರಬಹುದು ಎಂದು ಚೀನಾ ತಿರುಗಿ ಹೇಳಿಕೆ ನೀಡಿತ್ತು.
ವುಹಾನ್ ಚೀನಾದ ಶೈಕ್ಷಣಿಕ ಕಾಶಿ ಎನ್ನಲಾಗುತ್ತಿದ್ದರೂ ಗಲೀಜು ನಗರವೆಂಬ ಕುಖ್ಯಾತಿಗೂ ಪಾತ್ರವಾಗಿರುವ ನಗರವಾಗಿದೆ.ಮಧ್ಯ ಚೀನಾದ ದೊಡ್ಡ ನಗರ ಇದಾಗಿದ್ದು, ಇಲ್ಲಿ ೩೫೦ಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳಿವೆ.ವಿವಿಧ ದೇಶಗಳ ವಿದ್ಯಾರ್ಥಿಗಳೂ ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.ಇಂತಹ ಸಂಶೋಧನಾ ಕೇಂದ್ರಗಳಲ್ಲಿ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಕೂಡಾ ಸೇರಿದೆ. ಈ ಹಿಂದೆ ಜಗತ್ತನ್ನು ಕಾಡಿದ್ದ ಸಾರ್ಸ್ ಕೂಡಾ ಇಲ್ಲಿಂದಲೇ ಹರಡಿತ್ತು. ಆದರೆ ಚೀನಾ ಆರಂಭದಲ್ಲಿ ಇದನ್ನು ಮುಚ್ಚಿಟ್ಟಿದ್ದರೂ ಅನಂತರ ಜಗತ್ತಿನೆಲ್ಲೆಂಡೆಯಿಂದ ಆಕ್ರೋಶ ವ್ಯಕ್ತಗೊಂಡಾಗ ಸತ್ಯ ಒಪ್ಪಿಕೊಂಡಿತ್ತು.ಇಲ್ಲಿ ಸಾರ್ಸ್ ಮತ್ತಿತರ ವೈರಾಣುಗಳ ಅಧ್ಯಯನ ನಡೆಯುತ್ತಿದೆ. ಇಲ್ಲಿನ ವುಹಾನ್ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಕೊರೋನಾ ಪೀಡಿತರಾಗಿರುವುದು ಚೀನಾದತ್ತ ಸಂಶಯದ ನೋಟ ಬೀರುವಂತೆ ಮಾಡಿದೆ.
ಇದೀಗ ಕೊರೋನಾ ಭಾರತವನ್ನೂ ಕಾಡಿದೆ.ನಮ್ಮಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿಗಳಲ್ಲಿ  ಕೊರೋನಾ ವೈರಸ್ ಕಂಡುಬಂದಿದ್ದು,  ಈ ಮೂವರು ಕೂಡಾ ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು. ವೃದ್ಧರ ಜತೆಗೆ ಕೆಲವು ಯುವ-ಮಧ್ಯವಯಸ್ಕರು, ಮಕ್ಕಳಿಗೂ ವೈರಾಣು ತಗುಲಿ ಆತಂಕ ಸೃಷ್ಟಿಯಾಗಿದೆ.

ತೊಡಗಿಸಿಕೊಳ್ಳಬಾರದೇಕೆ?
ಇದಕ್ಕಾಗಿ ವಿವಿಧ ಪೌಷ್ಟಿಕ ಆಹಾರ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ, ಪಾನೀಯಗಳ ಸೇವನೆ ಮುಖ್ಯವಾಗುತ್ತದೆ.ಆಯುರ್ವೇದ ಈ ನಿಟ್ಟಿನಲ್ಲಿ ಅನೇಕ ಮಹತ್ವಪೂರ್ಣ ಸಲಹೆಗಳನ್ನು ನೀಡುತ್ತದೆ. ಯೋಗ, ಧ್ಯಾನ, ಪ್ರಾಣಾಯಾಮಗಳು  ದೈಹಿಕ ಕ್ಷಮತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹೀಗಿರುವಾಗ ನಮ್ಮ ಪಾರಂಪರಿಕ ವೈದ್ಯಕೀಯ ವ್ಯವಸ್ಥೆಗಳನ್ನು ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬಾರದೇಕೆ?ಕೆಲವೇ ನೂರು  ವರ್ಷಗಳ ಇತಿಹಾಸ ಹೊಂದಿರುವ ಆಧುನಿಕ ವೈದ್ಯಕೀಯ ಪದ್ಧತಿ ಒಂದೆಡೆ ಇದ್ದರೆ, ಸಾವಿರಾರು ವರ್ಷಗಳ ಇತಿಹಾಸ ನಮ್ಮ ಪಾರಂಪರಿಕ ವೈದ್ಯಪದ್ಧಗಳಿಗಿದ್ದು, ಇದನ್ನು ನಿರ್ಲಕ್ಷಿಸುವುದು ಸಾಧುವೆನಿಸದು. ಚೀನಾ ತನ್ನ ಪಾರಂಪರಿಕ ವೈದ್ಯ ಪದ್ಧತಿಗಳ ಮೂಲಕವೇ ಕೊರೋನಾ ವಿರುದ್ಧ ಸಾಕಷ್ಟು ಸಫಲತೆ ಗಳಿಸಿದೆ ಎಂಬ ವರದಿಗಳನ್ನೂ ನಾವು ಗಮನಿಸಬೇಕು.
ಕೆಲವು ದಿನಗಳ ಹಿಂದೆ, ಆಯುಷ್ ಇಲಾಖೆ ಆಯುರ್ವೇದ, ಹೋಮಿಯೋಪಥಿ, ಯುನಾನಿ ಪದ್ಧತಿಗಳಲ್ಲಿನ ತಜ್ಞರ ಸಲಹೆಯಂತೆ , ದೇಹದ ರೋಗನಿರೋಧ ಶಕ್ತಿ ವೃದ್ಧಿಸುವ ಕೆಲವು ಔಷಧಗಳನ್ನು ಪ್ರಸ್ತಾವಿಸಿತು.ಇದರಲ್ಲಿ ,ಷಡಂಗ ಪಾನೀಯ ಪೌಡರ್ (ಮುಸ್ತಾ, ಪಾರ್ಪಟ್, ಉಷೀರ್, ಚಂದನ, ಉದೀಚ್ಯ, ನಗರ್ ಒಳಗೊಂಡ)ಎಂಬ ಆಯುರ್ವೇದ ಔಷಧ, ಅಗಸ್ತ್ಯ ಹರಿತ್ಯಕಿ ಎಂಬ ಉಸಿರಾಟದ ತೊಂದರೆಗೆ ಬಳಸುವ ಆಯುರ್ವೇದ ಔಷಧ(೫ ಗ್ರಾಮ್)ವನ್ನು ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಜೊತೆ ಸೇವಿಸುವಂತೆ ಸಲಹೆ ನೀಡಿತು.ಶಮ್ಶಮಣಿ ವಾಟಿ (೫೦೦ಮಿ.ಗ್ರಾಂ)ಯನ್ನು ದಿನಕ್ಕೆರಡು ಬಾರಿ ಸೇವಿಸುವುದು ಉತ್ತಮವಾಗಬಹುದೆಂದು ತಿಳಿಸಿತು.ಇದೇ ರೀತಿ ೫ಗ್ರಾಮ್ಸ್ ಟ್ರಿಕಟು ಹುಡಿ, ಪಿಪ್ಪಲಿ, ಮರಿಚ್, ಶುಂಠಿಯನ್ನೊಳಗೊಂಡಂತೆ, ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರು ಸೇವನೆಗೂ ಸಲಹೆ ನೀಡಿತು.ಇದೇ ರೀತಿ ಅರ್ಸೆನಿಕಮ್ ಆಲ್ಬಮ್ ಎಂಬ ಹೋಮಿಯೋಪಥಿ ಔಷಧ ಉತ್ತಮವಾಗಬಹುದೆಂದು ಸಲಹೆ ನೀಡಿತ್ತು.
ಇಷ್ಟಕ್ಕೇ ಭಾರೀ ಗುಲ್ಲು ಎಬ್ಬಿಸಲಾಯಿತು. ಅಲೋಪಥಿಕ್‌ನಲ್ಲಿ ಇನ್ನೂ ಯಾವುದೇ ಔಷಧ ಅಥವಾ ಲಸಿಕೆ ಕಂಡುಕೊಳ್ಳಲಾಗಿಲ್ಲ. ಹೀಗಿರುವಾಗ ನೂರಾರು ಸಂಖ್ಯೆಯಲ್ಲಿ ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗುತ್ತಿರುವಾಗ ಯಾವುದೇ ಅಡ್ಡ ಪರಿಣಾಮಗಳಿಲ್ಲದ ನೂರಾರು ವರ್ಷಗಳಿಂದ ಬಳಕೆಯಲ್ಲಿರುವ , ನಮ್ಮ ಹಿತ್ತಿಲು, ಮನೆಗಳಲ್ಲಿ ಲಭ್ಯವಿರುವ ರೋಗನಿರೋಧಕಗಳನ್ನು ಬಳಕೆ ಮಾಡುವುದಕ್ಕೆ ಯಾಕೆ ಇಂತಹ ತಕರಾರು?ಅರ್ಥವಾಗುತ್ತಿಲ್ಲ. ಚೀನಾದಂತಹ ದೇಶಗಳಲ್ಲಿ ಪಾರಂಪರಿಕ ವೈದ್ಯ ಪದ್ಧತಿಗಳ ಮೂಲಕ ಜನರನ್ನು ಸೋಂಕುಮುಕ್ತಗೊಳಿಸಲು ಸಾಧ್ಯವಾಗುವುದಾದರೆ ನಮ್ಮಲ್ಲಿ ಯಾಕೆ ಇಂತಹ ಅಡ್ಡಿ?ಈಗ ಆಗಬೇಕಿರುವುದು ಜನರನ್ನು ಈ ಸೋಂಕಿನಿಂದ ಪಾರು ಮಾಡುವುದು.ವಿಪರ್ಯಾಸವೆಂದರೆ, ಎಡಪಂಥೀಯರು ಹೊರಗಡೆ ಗೋಮೂತ್ರವನ್ನು ಅಪಹಾಸ್ಯ ಮಾಡುತ್ತಿದ್ದರೆ ಒಬ್ಬ ಕಟ್ಟರ್ ಎಡಪಂಥೀಯ ವಿಜ್ಞಾನಿಯೊಬ್ಬರು ಗೋಮೂತ್ರ ಸೇವನೆ ಮಾಡುತ್ತಿರುವ ಮತ್ತು ಮನೆಯಲ್ಲಿ ಯಜ್ಞವೊಂದನ್ನು ಆಯೋಜಿಸಿದ ಮಾಹಿತಿ ಬಂದಿದೆ.ಇದೇ ರೀತಿ ದಿಲ್ಲಿಯ ಏಮ್ಸ್‌ನ ವಿಜ್ಞಾನಿಯೊಬ್ಬರು ಈ ಸಾಂಕ್ರಾಮಿಕಕ್ಕೆ ಅಲೋಪಥಿಕ್‌ನಿಂದ ಆಯುರ್ವೇದದಂತಹ ಪಾರಂಪರಿಕ ಪದ್ಧತಿಗಳಲ್ಲಿನ ಔಷಧವೇ ಉತ್ತಮ .ಯಾಕೆಂದರೆ ಇದು ದೇಶಾದ್ಯಂತ ಎಲ್ಲರಿಗೂ ಸುಲಭ ಲಭ್ಯ. ಇದರಿಂದ ಜನರನ್ನು ಕ್ಷಿಪ್ರವಾಗಿ ಅಪಾಯದಿಂದ ರಕ್ಷಿಸಲು ಸಾಧ್ಯವಿದೆ.ಆದರೆ ನಾನೀ ಮಾತನ್ನು ಬಹಿರಂಗವಾಗಿ ಆಡಿದರೆ ಆಪತ್ತಿಗೆ ಸಿಲುಕಬಹುದು ಎನ್ನುತ್ತಾರೆ ! ಅಲೋಪಥಿಕ್‌ನಲ್ಲಿನ  ಆಧುನಿಕ ಉಪಕರಣ, ವ್ಯವಸ್ಥೆ, ಸೌಕರ್ಯಗಳನ್ನು  ಮತ್ತು ಪಾರಂಪರಿಕ ಪದ್ಧತಿಗಳನ್ನು ಸಮನ್ವಯಗೊಳಿಸಿದರೆ ಭಾರತವನ್ನು ಕೊರೋನಾ ಸೋಂಕಿನಿಂದ ಪಾರು ಮಾಡಲು ಖಂಡಿತ ಸಾಧ್ಯವಾಗಬಹುದು. ವಾಸ್ತವ ಹೀಗಿರುವಾಗ ಆಷಾಢಭೂತಿತನ  ಜನರ ಬದುಕಿನಲ್ಲಿ ಚೆಲ್ಲಾಟವಾಡಿದಂತಾಗದೇ?
ಒಣ ಚರ್ಚೆ, ಪ್ರತಿಷ್ಠೆ ಸಾಸುವ ಸಮಯವಿದಲ್ಲ. ಬದಲಿಗೆ ಪರಸ್ಪರ ಸಮನ್ವಯದಿಂದ ಎಲ್ಲ ಉತ್ತಮ ಅಂಶಗಳ ಸಹಯೋಗದಿಂದ ಜನರನ್ನು ಈ ಸೋಂಕಿನಿಂದ ಪಾರು ಮಾಡಬೇಕಿದೆ.ಈಗಾಗಲೇ ಅನೇಕ ಆಯುರ್ವೇದ ವೈದ್ಯಕೀಯ ತಜ್ಞರು ಕೆಲವು ಫಾರ್ಮುಲಾಗಳನ್ನು ಪ್ರಸ್ತಾವಿಸಿದ್ದಾರೆ. ಹಾಗೆಯೇ ಪಾರಂಪರಿಕ ಆಕ್ಯುಪ್ರೆಷರ್ ಚಿಕಿತ್ಸಾ ತಜ್ಞರು ಕೂಡಾ ಕೆಲವು ಮಹತ್ವದ ಚಿಕಿತ್ಸಾ ಸಲಹೆಗಳನ್ನು ಪ್ರಸ್ತಾವಿಸುತ್ತಿದ್ದಾರೆ. ಇವೆಲ್ಲವನ್ನೂ ಸಮನ್ವಯಗೊಳಿಸಿ ಕ್ಷಿಪ್ರ  ಕಾರ್ಯಾಚರಣೆ ಇಂದಿನ ತುರ್ತಾಗಿದೆ .
ಭಾರತೀಯ ದಾರ್ಶನಿಕರ ಎಚ್ಚರಿಕೆ ನಿಜವಾಗುತ್ತಿದೆಯೇ?
ಈಗ ಕೊರೋನಾ ಪಿಡುಗು ಇಡಿ ಜಗತ್ತನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಚೀನಾ ಇನ್ನೂ ಈ ಬಗ್ಗೆ ಯಾವುದೇ ಪಶ್ಚಾತ್ತಾಪದ ನುಡಿಯಾಡಿಲ್ಲ. ಬದಲಿಗೆ ಕೊರೋನಾ ವೈರಸ್ ಹರಡುವಿಕೆಗೆ ತಾನು ಹೊಣೆಯಲ್ಲ ಎಂದು ಬಿಂಬಿಸಿಕೊಳ್ಳಲು ಹೆಣಗುತ್ತಿದೆ.   ಈ ಸಂದರ್ಭದಲ್ಲೇ ಕಳೆದ ಒಂದೆರಡು ವರ್ಷಗಳಿಂದ ಭಾರತೀಯ ಸಾಧುಸಂತರು, ದಾರ್ಶನಿಕರು, ಪಾರಂಪರಿಕ ಚಿಂತಕರು ಮುಂಬರುವ ದಿನಗಳಲ್ಲಿ ವೈರಾಣು ಹಾವಳಿಯ ಆಪತ್ತಿನ ಬಗ್ಗೆ ಎಚ್ಚರಿಸುತ್ತಾ ಬಂದಿದ್ದಾರೆ. ಅಲ್ಲದೆ ಇದಕ್ಕಾಗಿ ವಿವಿಧ ದೇವತಾ ಪ್ರಾರ್ಥನೆ, ಪೂಜೆ, ಯಜ್ಞ ಯಾಗಾದಿಗಳನ್ನು ಮಾಡುವ ಮೂಲಕ ವಾಯು ಮಾಲಿನ್ಯವನ್ನು ತಡೆದು ವಾತಾವರಣವನ್ನು ಶುದ್ಧಗೊಳಿಸಲು ಶ್ರಮಿಸುತ್ತಿದ್ದಾರೆ ಎಂಬುದು ಗಮನಾರ್ಹ ಅಂಶ. ಆದರೆ ಆಧುನಿಕ ಜಗತ್ತು ಇದನ್ನು ಗಮನಿಸದೆ ಹೋಗಿದೆಯಾದರೂ , ಇದರ ಹಿಂದಿರುವ ಪ್ರಾಮಾಣಿಕ ಕಾಳಜಿ, ಜೀವಪರ ನಿಲುವುಗಳನ್ನು ಅರ್ಥ ಮಾಡಿಕೊಳ್ಳುವ ಕಾಲ ಬಂದಿದೆ.
ವಿಜ್ಞಾನದ ನೆರವು ಪಡೆಯುತ್ತಿಲ್ಲವೇಕೆ?
ಕೊರೋನಾ ವೈರಸ್ ಪಿಡುಗನ್ನು ತಡೆಯುವಲ್ಲಿ ಈ ವರೆಗೆ ಆಧುನಿಕ ವೈದ್ಯ ವಿಜ್ಞಾನ ಯಶಸ್ವಿಯಾಗಿಲ್ಲ. ಯಾವುದೇ ಲಸಿಕೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.ಇದೇ ವೇಳೆ ಕೊರೋನಾ ವೈರಸ್ ತಾನೇ ಆಗಿ ಮಾರಣಾಂತಿಕ ವೈರಸ್ ಅಲ್ಲ ಎಂಬ ಅಂಶವನ್ನೂ ಗಮನಿಸಬೇಕಾಗಿದೆ. ಆದರೆ ಇದು ದುರ್ಬಲ ಆರೋಗ್ಯ ಹೊಂದಿರುವವರಲ್ಲಿ, ವೃದ್ಧರು, ವಿವಿಧ ಕಾಯಿಲೆ ಪೀಡಿತರಿಗೆ ತಗುಲಿದರೆ ಅವರ ಕಾಯಿಲೆ ಉಲ್ಬಣಿಸುವಂತೆ ಮಾಡುತ್ತದೆ ಎಂಬುದು ಗಮನಾರ್ಹ.ಆದಾಗ್ಯೂ ಇದರ ಹರಡುವಿಕೆಯ ವೇಗ ಮತ್ತು  ತೀವ್ರತೆಯೇ ದೊಡ್ಡ ಸವಾಲಾಗಿದೆ.ಈ ಹಿನ್ನೆಲೆಯಲ್ಲಿ ವ್ಯಕ್ತಿಗಳ ಆರೋಗ್ಯ ಕ್ಷಮತೆಯನ್ನು ಕಾಯ್ದುಕೊಳ್ಳಬೇಕಾಗಿರುವುದೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ್ದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss