Wednesday, June 29, 2022

Latest Posts

ಮುಂದಿನ ನಾಲ್ಕುದಿನ ರಾಜ್ಯದ ಹಲವೆಡೆ ಭಾರಿ ಮಳೆ ಸಾಧ್ಯತೆ: ಎಚ್ಚರಿಕೆ ವಹಿಸಲು ಸೂಚನೆ

ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.
ರಾಜ್ಯದ ಬಾಗಲಕೋಟೆ, ಬೆಳಗಾವಿ, ಉತ್ತರ ಒಳನಾಡು, ಹಾವೇರಿ, ವಿಜಯಪುರ, ದಕ್ಷಿಣ ಒಳನಾಡು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾನುವಾರ ಸಹಿತ ಜೂನ್ 1,2,3 ರಂದು ಭಾರಿ ಮಳೆಯಾಗಲಿದ್ದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಹುಣಸೂರು, ಬೇಗೂರು, ಚಿತ್ರದುರ್ಗ, ಮೈಸೂರು, ಭರಮ್‌ಸಾಗರ, ಆನೇಕಲ್, ಕೊಳ್ಳೇಗಾಲ ಕುಶಾಲ್‌ನಗರ, ಕೋಲಾರ, ಪೆರಿಯಪಟ್ನಾ, ನುಗ್ಗೇಹಳ್ಳಿ, ದಾವಣಗೆರೆ, ಬಂಗಾರಪೇಟೆ, ತಿ ನರಸೀಪುರ, ಶ್ರವಣಬೆಳಗೊಳ, ರಾಯಲ್‌ಪಾಡು, ಬೆಂಗಳೂರು, ವಿರಾಜಪೇಟೆ, ತೊಂಡೆಬಾವಿ, ಕೃಷ್ಣರಾಜಸಾಗರ, ಬೇಲೂರು, ಕೊಟ್ಟಿಗೆಹಾರ, ಚಿಂತಾಮಣಿ, ಸಂತೆಬೆನ್ನೂರು, ಶಿರಾ, ಮಧುಗಿರಿಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜೂನ್ 1 ಕ್ಕೆ ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ಉತ್ತಮ ಮುಂಗಾರು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss