ಮುಂದಿನ ಹತ್ತು ದಿನಗಳಲ್ಲಿ ದೇಶದ ಕೆಲ ಪ್ರಮುಖ ಮಾರ್ಗಗಳಲ್ಲಿ ಇನ್ನೂ 2600 ರೈಲುಗಳ ಸಂಚಾರ!

0
97

ಹೊಸದಿಲ್ಲಿ: ಮುಂದಿನ ಹತ್ತು ದಿನಗಳಲ್ಲಿ ಇನ್ನೂ 2600 ವಿಶೇಷ ರೈಲುಗಾಡಿಗಳು ದೇಶದಲ್ಲಿ ಸಂಚಾರ ಆರಂಭಿಸಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿನೋದ್‌ಕುಮಾರ್ ಯಾದವ್ ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಸುಮಾರು 36 ಲಕ್ಷ ಮಂದಿ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳಬೇಕಿದೆ. ಈ ದಿಶೆಯಲ್ಲಿ ಮಂಡಳಿ ದೇಶದ ಕೆಲ ಪ್ರಮುಖ ಮಾರ್ಗಗಳಲ್ಲಿ ರೈಲುಗಾಡಿಗಳು ಸಂಚರಿಸಲಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯಗಳು ಒಪ್ಪಿಗೆ ನೀಡಿದಲ್ಲಿ , ಆಯಾ ರಾಜ್ಯದೊಳಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಾಡಿಗಳ ಸಂಚಾರ ಆರಂಭಿಸಲು ತೀರ್ಮಾನಿಸಲಾಗುವುದು. ಪರಿಸ್ಥಿತಿ ಅನುಸರಿಸಿ ಇನ್ನು ಮುಂದೆ ಪ್ಯಾಸಿಂಜರ್ ಹಾಗೂ ಎಕ್ಸ್ ಪ್ರೆಸ್ ಗಾಡಿಗಳ ಸಂಚಾರ ಕೂಡಾ ಆರಂಭವಾಗಲಿದೆ ಎಂದು ಯಾದವ್ ತಿಳಿಸಿದರು,

LEAVE A REPLY

Please enter your comment!
Please enter your name here