ಹೊಸದಿಲ್ಲಿ: ಮುಂದಿನ 5 ವರ್ಷಗಳ ಕಾಲ ಭಾರತದಲ್ಲಿ 11.5 ಲಕ್ಷ ಕೋಟಿ ರೂ ಮೊತ್ತದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಭಾರತದಲ್ಲಿ ಉತ್ಪಾದಿಸಲಗುತ್ತದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಪಿಎಲ್ಐ(Production-linked Incentive Scheme) ಯೋಚನೆ ಅಡಿಯಲ್ಲಿ ಮುಂದಿನ 5ವರ್ಷಗಳ ಕಾಲ ಭಾರತದಲ್ಲಿ 11.5 ಲಕ್ಷ ಕೋಟಿ ರೂ ಮೊತ್ತದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಉತ್ಪಾದಿಸಲಗುತ್ತದೆ. ಈಗಾಗೇ 22 ಸಂಸ್ಥೆಗಳು ಕಾರ್ಯನಿರ್ವಹಿಸಲು ಮುಂದಾಗಿದ್ದು, ಉತ್ಪಾನೆಯಲ್ಲಿ 7 ಲಕ್ಷ ಕೋಟಿ ರೂ ವೆಚ್ಚದ ಉತ್ತಪನ್ನಗಳನ್ನು ರಫ್ತು ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ವಲಯವು ದೇಶದಲ್ಲಿ 3 ಲಕ್ಷ ನೇರ ಮತ್ತು 9 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಪ್ರಸಾದ್ ಹೇಳಿದರು.
ದೇಶದಲ್ಲಿ ಆಳವಾದ ಪೂರೈಕೆ ಸರಪಳಿಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ಉತ್ಪಾದನೆಯಿಂದಾಗಿ ದೇಶೀಯ ಮೌಲ್ಯವರ್ಧನೆಯು ಶೇ.20 ರಿಂದ ಸುಮಾರು 40ಕ್ಕೆ ಏರಿದೆ ಎಂದು ಅವರು ಮಾಹಿತಿ ನೀಡಿದರು.
ದೇಶದ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕಗಳು ಅಲ್ಪಾವಧಿಯಲ್ಲಿಯೇ 6 ಕೋಟಿಯಿಂದ ಸುಮಾರು 33 ಕೋಟಿಗೆ ಏರಿದೆ ಎಂದು ಅವರು ಹೇಳಿದರು.