Wednesday, August 10, 2022

Latest Posts

ಮುಂದುವರಿದ ಕೊರೋನಾ ಅಟ್ಟಹಾಸ: ಕೊಡಗು ಜಿಲ್ಲೆಯಲ್ಲಿ 16 ಹೊಸ ಕೋವಿಡ್ ಪ್ರಕರಣಗಳು ದೃಢ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 16 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ
ಮಡಿಕೇರಿಯ ಕಾರಗುಂದ ಕಡಿಯತ್ತೂರಿನ 32 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಸಿದ್ದಾಪುರದ ಎಂ.ಜಿ ರಸ್ತೆಯ 37ವರ್ಷದ ಮಹಿಳೆ, 14ವರ್ಷದ ಬಾಲಕಿ, 58ವರ್ಷದ ಪುರುಷ, 47, 70 ವರ್ಷದ ಮಹಿಳೆ ಮತ್ತು 9 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ಶಿರಂಗಾಲ ಕೋಟೆಯ 76 ವರ್ಷದ ಪುರುಷ ಮತ್ತು 60 ವರ್ಷದ ಮಹಿಳೆ, ವೀರಾಜಪೇಟೆಯ ಕಲ್ಲುಬಾಣೆಯ 38 ವರ್ಷದ ಪುರುಷ, ಮಡಿಕೇರಿ ಭಗವತಿ ನಗರದ 29ವರ್ಷದ ಪುರುಷ, ಕುಶಾಲನಗರದ 35ವರ್ಷದ ಪುರುಷ, ಕುಶಾಲನಗರದ ದಂಡಿನಪೇಟೆಯ 52 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಆಜಾದ್ ನಗರದ 25, 28 ವರ್ಷದ ಮಹಿಳೆ, 14ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು,ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 776ಕ್ಕೆ ಏರಿಕೆಯಾಗಿದೆ.
ಈ ಪೈಕಿ 518 ಮಂದಿ ಗುಣಮುಖರಾಗಿದ್ದಾರೆ. 247ಸಕ್ರಿಯ ಪ್ರಕರಣಗಳಿದ್ದು, 11ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 210 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss