Thursday, August 18, 2022

Latest Posts

ಮುಂದುವರೆಯಲಿದೆ ನಿರ್ಬಂಧ: ಸೆ.30ರವರೆಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟ ಬಂದ್

ಹೊಸದಿಲ್ಲಿ: ಸೆ.30ರವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಕೊರೋನಾ ಸೋಂಕಿನಿಂದ ಕಳೆದ 5 ತಿಂಗಳಿನಿಂದ ಭಾರತ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಈ ನಿರ್ಬಂಧನವನ್ನು ಸೆ.30ರವರೆಗೂ ವಿಸ್ತರಿಸಲಾಗುತ್ತದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಕೇಸ್-ಟು-ಕೇಸ್ ಆಧಾರದ ಮೇಲೆ ಸಮರ್ಥ ಪ್ರಾಧಿಕಾರವು ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳನ್ನು ಅನುಮತಿಸಬಹುದು ಎಂದು ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಿದೆ.

ಕೊರೋನಾ ವೈರಸ್ ರೋಗದಿಂದಾಗಿ ಮಾರ್ಚ್ 23 ರಿಂದ ಭಾರತದಲ್ಲಿ ಪರಿಶಿಷ್ಟ ಅಂತಾರಾಷ್ಟ್ರೀಯ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ಇತರ ದೇಶಗಳೊಂದಿಗೆ ದ್ವಿಪಕ್ಷೀಯ ವಾಯು ಬಬಲ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ನಿರ್ಬಂಧನವೂ ಅಂತಾರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!