Wednesday, July 6, 2022

Latest Posts

ಮುಂಬೈನಿಂದ ಉಡುಪಿಗೆ ಆಗಮಿಸುತ್ತಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಪವಾಡ ಸದೃಶ ಪಾರು

ಉಡುಪಿ: ಮಹಾರಾಷ್ಟ್ರದ ಮುಂಬೈನಿಂದ ಉಡುಪಿಗೆ ಆಗಮಿಸುತ್ತಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲರ್ ವಾಹನ ಮಹಾರಾಷ್ಟ್ರದ ಲೋನಾವಾಲ ಬಳಿ ತಲುಪುತ್ತಿದ್ದಂತೆ ತಾಂತ್ರಿಕ ದೋಷದಿಂದ ಇಂಜಿನಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೆಂಕಿ ಸಂಪೂರ್ಣ ವಾಹನವನ್ನು ಆವರಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ.
ಬೆಂಕಿಗೆ ಆಹುತಿಯಾದ ವಾಹನದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಆಗಮಿಸುತ್ತಿದ್ದ 11 ಜನರು ಇದ್ದರು. ಮುಂಬೈಯ ಭಾಂಡುಪ್ ನಿಂದ ಕೇಶವ ಪೂಜಾರಿ ಅವರ ಕುಟುಂಬ ಊರಿಗೆ ಹೊರಟಿತ್ತು. ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ವಾಹನದಿಂದ ಪ್ರಯಾಣಿಕರು ಇಳಿದು ಪಾರಾಗಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದಂತಾಗಿದೆ. ಇದೀಗ ಬೇರೆ ವಾಹನದ ಮೂಲಕ ಕೇಶವ ಪೂಜಾರಿ ಅವರ ಕುಟುಂಬ ಊರಿಗೆ ಆಗಮಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss