Wednesday, August 17, 2022

Latest Posts

ಮುಂಬೈನಿಂದ ಕಲಬುರಗಿಗೆ 1241 ವಲಸಿಗರ ಆಗಮನ: ಜಿಲ್ಲಾಧಿಕಾರಿ ಶರತ್ ಬಿ.

ಕಲಬುರಗಿ:ಮುಂಬೈನಿಂದ ಕಲಬುರಗಿಗೆ ಶುಕ್ರವಾರ ಬೆಳಗಿನ ಜಾವ “ಶ್ರಮಿಕ್” ವಿಶೇಷ ರೈಲಿನಲ್ಲಿ 1241 ವಲಸಿಗರು ಬಂದಿದ್ದು,ಈ ಪೈಕಿ ನೆರೆಯ ಯಾದಗಿರಿ ಜಿಲ್ಲೆಯ 345 ಹಾಗೂ ಮಹಾರಾಷ್ಟ್ರ ದ ಸೋಲಾಪುರದ ಅಕ್ಕಲಕೋಟೆಯ 4 ಮಂದಿ ಸೇರಿದ್ದಾರೆ.
ಕಲಬುರಗಿ ಜಿಲ್ಲೆಯ 892 ವಲಸಿಗರ ಪೈಕಿ 843 ಮಂದಿ ಚಿತ್ತಾಪುರ ತಾಲ್ಲೂಕಿಗೆ ಸೇರಿದವರಾಗಿದ್ದಾರೆ. ಉಳಿದಂತೆ ಶಹಾಬಾದ್ 17 ಮಂದಿ, ಜೇವರ್ಗಿ 11, ಕಲಬುರಗಿ 9,ಅಫಜಲಪುರ 5, ಅಳಂದ 4,ಚಿಂಚೋಳಿ 2 ಮಂದಿ ಹಾಗೂ ಸೇಡಂ ತಾಲ್ಲೂಕಿನ ಒಬ್ಬರು ಬಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಶರತ್. ಬಿ ಅವರು ತಿಳಿಸಿದ್ದಾರೆ.
ಎಲ್ಲಾ ವಲಸಿಗರಿಗೂ ರೈಲು ನಿಲ್ದಾಣದಲ್ಲಿ ಕೋವಿಡ್ ಆರೋಗ್ಯ ತಪಾಸಣೆ (ಸ್ಕ್ರೀನಿಂಗ್) ಮಾಡಿಸಿ ಆಯಾ ತಾಲ್ಲೂಕಿನ ಕ್ವಾರಾಂಟೈನ್ ಕೇಂದ್ರ ಗಳಿಗೆ ಕಳುಹಿಸಲಾಗಿದೆ.
ಚಿತ್ತಾಪುರ 16,ನಾಲವಾರ 3, ಯಾದಗಿರಿ 13 ಸೇರಿ ಒಟ್ಟು 39 ಎನ್ಇಕೆಆರ್ಟಿಸಿ ಬಸ್ ಗಳಲ್ಲಿ ವಲಸಿಗರನ್ನು ಕ್ವಾರಾಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ.
2393 ಮಂದಿ ಆಗಮನ
ಮೇ 11 ರಂದು ಥಾಣೆಯಿಂದ 1152 ವಲಸಿಗರು ಮತ್ತು ಮೇ 14ರಂದು ಮುಂಬೈನಿಂದ 1241 ಮಂದಿ ಬಂದಿದ್ದು, ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಮಹಾರಾಷ್ಟ್ರ ದ ಅಕ್ಕಲಕೋಟೆಯ ಒಟ್ಟಾರೆ 2,393 ವಲಸಿಗರು ಇದುವರೆಗೆ ಕಲಬುರಗಿ ರೈಲು ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಈ ಪೈಕಿ ಉಭಯ ರೈಲುಗಳಲ್ಲಿ ಕರೆತರಲಾದ ಕಲಬುರಗಿ ಜಿಲ್ಲೆಯ ಎಲ್ಲಾ 1770 ಜನರನ್ನ ಆಯಾ ತಾಲ್ಲೂಕಿನ ಕ್ವಾರಾಂಟೈನ್ ಕೇಂದ್ರಗಲ್ಲಿಟ್ಟು ನಿಗಾವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!