ಮುಂಬೈ : ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ಮುಂಬೈನಲ್ಲಿ ದೊಡ್ಡ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಕೂಡಲೇ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.
ಇಂಡಿಗೋ ಸಂಸ್ಥೆಯ ಏರ್ಬಸ್ ಎ-320 (ಫ್ಲೈಟ್ ನಂ. 6ಇ 5047) ಭಾನುವಾರ ಬೆಳಗ್ಗೆ 8.05ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿತ್ತು. ಹೀಗೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪಕ್ಷಿಯೊಂದು ವಿಮಾನಕ್ಕೆ ಬಡಿದಿದೆ. ಆಗ ಅದನ್ನು ಪೈಲಟ್ ಮುಂಬೈ ನಿಲ್ದಾಣಕ್ಕೆ ಮರಳಿ ತಲುಪಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.