Wednesday, June 29, 2022

Latest Posts

ಮುಂಬೈ ಬಿಟ್ಟ ಬೆನ್ನಲ್ಲೇ ಹೊಸ ಬಾಂಬ್​ ಸಿಡಿಸಿದ ನಟಿ ಕಂಗನಾ ರಾಣಾವತ್​!

ಮುಂಬೈ: ಹಿಮಾಚಲ ಪ್ರದೇಶಕ್ಕೆ ಹಿಂತಿರುಗಿದ ಬಾಲಿವುಡ್​ ನಟಿ ಕಂಗನಾ ರಾಣಾವತ್​ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ಹೊಸ ಬಾಂಬ್​ ಸಿಡಿಸಿದ್ದಾರೆ.
ಈ ಬಗ್ಗೆ ಟ್ವೀಟ್​ ಮಾಡಿರುವ ಕಂಗನಾ, ಮೂವೀ ಮಾಫಿಯಾ, ಸುಶಾಂತ್​ ಸಿಂಗ್​ ಕೊಲೆಗಾರರು ಮತ್ತು ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ನನ್ನ ಮೇಲೆ ಸಿಎಂ ಉದ್ಧವ್​ ಠಾಕ್ರೆ ಕೆಂಗಣ್ಣು ಬೀರಲು ಇದೇ ಕಾರಣ ಅಂತ ಬರೆದುಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಜೊತೆ ಸಿಎಂ ಪುತ್ರ ಆದಿತ್ಯಾ ಠಾಕ್ರೆಗೆ ಆತ್ಮೀಯ ಸಂಬಂಧವಿದೆಇದೇ ಕಾರಣಕ್ಕೆ ಸಿಎಂ ಉದ್ಧವ್ ಠಾಕ್ರೆ ನನ್ನನ್ನು ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಟ್ಟದ್ದನ್ನು ಎತ್ತಿ ತೋರಿಸಿದ್ದಕ್ಕೆ ಅವರೆಲ್ಲ ಸೇರಿ ನನ್ನನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss