Monday, August 15, 2022

Latest Posts

ಮುಂಬೈ ಸಿಟಿ ಸೆಂಟರ್ ಮಾಲ್’ನಲ್ಲಿ ಅಗ್ನಿ ಅವಘಡ: 3500 ಜನರ ಸ್ಥಳಾಂತರ

ಮುಂಬೈ:  ದಕ್ಷಿಣ ಮುಂಬೈನ್ ಸಿಟಿ ಸೆಂಟರ್ ಮಾಲ್ ನಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು,  ಮುನ್ನಚ್ಚರಿಕಾ ಕ್ರಮವಾಗಿ ಮಾಲ್‌ ಪಕ್ಕದ ಕಟ್ಟಡದಿಂದ ಸುಮಾರ 3500 ಜನರನ್ನು ಸ್ಥಳಾಂತರಿಸಲಾಗಿದೆ.

ಮಾಲ್‌ನ ಎರಡನೇ ಅಂತಸ್ತಿನಲ್ಲಿದ್ದ ಮೊಬೈಲ್‌ ಅಂಗಡಿಯೊಂದರಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ.  ನಂತರ ಇಡೀ ಮಾಲ್ ಗೂ ಬೆಂಕಿ ಆವರಿಸಿದೆ. ಕೂಡಲೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.ಮಾಲ್ ಅಕ್ಕ ಪಕ್ಕದ ಕಟ್ಟದಲ್ಲಿರುವ ಸುಮಾರ 3500 ಜನರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿರುವುದಾಗಿ ಸ್ಥಳಿಯಾಡಳಿತ ತಿಳಿಸಿದೆ.

ಬೃಹನ್‌ ಮುಂಬೈ ಪಾಲಿಕೆ ನೀಡಿರುವ ಮಾಹಿತಿಯ ಪ್ರಕಾರ 250 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಮತ್ತು 24 ಅಗ್ನಿಶಾಮಕ ಯಂತ್ರಗಳು ಮತ್ತು 16 ಜಂಬೊ ಟ್ಯಾಂಕರ್‌ಗಳು ಸೇರಿದಂತೆ ಸುಮಾರು 50 ಅಗ್ನಿಶಾಮಕ ವಾಹನಗಳು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss