Sunday, August 14, 2022

Latest Posts

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಹಿನ್ನೆಲೆ, ಸಿಎಂ- ಶಿವರಾಜ್ಕುಮಾರ್ ‘ಭೇಟಿ ರದ್ದು, ಚಿತ್ರರಂಗದ ಮುಂದಿನ ನಡೆ ಏನು?

ಚಿತ್ರಮಂದಿರ ,  ಚಿತ್ರರಂಗದ  ಕೊರತೆಯ  ಕುರಿತು   ಆಗಸ್ಟ್  ೪ರಂದು  ಅಂದರೆ  ಮಂಗಳವಾರ   ಹ್ಯಾಟ್ರಿಕ್  ಹೀರೋ  ಶಿವರಾಜ್ ಕುಮಾರ್  ಅವರು  ಮುಖ್ಯಮಂತ್ರಿ  ಬಿ.ಎಸ್.  ಯಡಿಯೂರಪ್ಪ  ಅವರನ್ನು  ‘ಭೇಟಿ ಮಾಡಬೇಕಿತ್ತು.  ಆದರೆ  ಸಿಎಂಗೆ  ಕೊರೋನಾ  ಪಾಸಿಟಿವ್  ದೃಢಪಟ್ಟಿದ್ದರಿಂದ  ಈ  ಕಾರ್ಯಕ್ರಮ  ಸ್ಥಗಿತಗೊಂಡಿದೆ. ಚಿತ್ರ ಪ್ರದರ್ಶನಗಳು ಸ್ಥಗಿತ ಆಗಿರುವುದರಿಂದ ಚಿತ್ರರಂಗಕ್ಕೆ ಯಾವೆಲ್ಲ ತೊಂದರೆಗಳಾಗಿವೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಈ ಸಲುವಾಗಿ ನಾಗವಾರದಲ್ಲಿರುವ ಶಿವಣ್ಣನ ಮನೆಯಲ್ಲಿ  ಇತ್ತೀಚಿಗೆ  ಚಿತ್ರರಂಗದ  ಗಣ್ಯರು  ಸಭೆ   ಸೇರಿದ್ದರು.  ಆ ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ, ಮನವಿ ಸಲ್ಲಿಸಲು ಮಂಗಳವಾರ ‘ಭೇಟಿಗೆ ಸಮಯ ನಿಗದಿ ಆಗಿತ್ತು. ಸದ್ಯ ಆ ‘ಭೇಟಿಯನ್ನು ಮುಂದೂಡಲಾಗಿದೆ. ಬಿ.ಎಸ್. ಯಡಿಯೂರಪ್ಪ ತಮಗೆ ಕೊರೋನಾ ಪಾಸಿಟಿವ್ ಆಗಿದೆ ಎಂಬ ವಿಚಾರವನ್ನು ಭಾನುವಾರದಂದು ಸ್ಪಷ್ಟಪಡಿಸಿದರು. ಪ್ರಸ್ತುತ ಅವರು ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ರಾಜಕಾರಣಿಗಳು, ಸಿನಿಮಾರಂಗದ ಗಣ್ಯರು ಮುಂತಾದವರು ಪ್ರಾರ್ಥಿಸುತ್ತಿದ್ದಾರೆ. ಅವರು ಸಂಪೂರ್ಣ ಚೇತರಿಸಿಕೊಂಡ ಬಳಿಕವೇ ಅವರನ್ನು ಶಿವರಾಜ್‌ಕುಮಾರ್ ‘ಭೇಟಿ ಮಾಡಲಿದ್ದಾರೆ. ಡಾ. ರಾಜ್‌ಕುಮಾರ್, ಅಂಬರೀಷ್ ಬಳಿಕ ಚಂದನವನ  ನಾಯಕ ಯಾರು ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಲೇ ಇತ್ತು. ಆ ನಾಯಕತ್ವವನ್ನು ಇತ್ತೀಚೆಗೆ ಶಿವರಾಜ್‌ಕುಮಾರ್ ವಹಿಸಿಕೊಂಡಿದ್ದಾರೆ. ಅವರಿಗೆ ಇಡೀ ಕನ್ನಡ ಚಿತ್ರರಂಗ ಬೆಂಬಲವಾಗಿ ನಿಂತಿದೆ. ಅವರು ಚಂದನವನದ ನಾಯಕತ್ವ ವಹಿಸಿಕೊಂಡಾಗಿನಿಂದ ಹಲವು ಸಭೆಗಳನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತರ ಕನ್ನಡ   ಚಿತ್ರರಂಗ ತುಂಬಾ  ಸವಾಲುಗಳನ್ನು  ಎದುರಿಸುತ್ತಿದ್ದು,    ಶಿವಣ್ಣನ ಮುಂದಾಳತ್ವದಲ್ಲಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ಲಾನ್  ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss