Latest Posts

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ; ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಕೋಟ

ಮಂಗಳೂರು: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ನಡೆದ ಪುಂಡಾಟಿಕೆಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ಮುಖ್ಯಮಂತ್ರಿ ಯಡಿಯೂರಪ್ಪ: ದಣಿವರಿಯದ ಜನನಾಯಕ!

sharing is caring...!

ಪ್ರಕಾಶ್ ಇಳಂತಿಲ

ಒಬ್ಬ ನಾಯಕನಾದವನ ನಾಯಕತ್ವ ಗುಣ ವ್ಯಕ್ತಗೊಳ್ಳುವುದೇ ಬಿಕ್ಕಟ್ಟಿನ ಸಮಯದಲ್ಲಿ.ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಂತಹ ಹೋರಾಟಗಾರ, ಜನನಾಯಕ ಎಂಬುದನ್ನು ರಾಜ್ಯ ಕಳೆದ ಒಂದು ವರ್ಷದಲ್ಲಿ ಕಂಡ ಪ್ರವಾಹ,ಬರ ಮತ್ತು ಈಗಿನ ಕೋವಿಡ್ ಬಿಕ್ಕಟ್ಟಿನ ನೆಲೆಯಲ್ಲಿ ಮತ್ತೊಮ್ಮೆ ದೃಢಪಡಿಸಿದ್ದಾರೆ.ಮಾತ್ರವಲ್ಲದೆ, ತಾವು ನೈಜ ಜನಸೇವಕ ಎಂಬುದನ್ನು ತಮ್ಮ ಕಾರ್ಯವೈಖರಿಯಿಂದಲೇ ಋಜುಪಡಿಸಿದ್ದಾರೆ.ಅವರ ಇಚ್ಛಾಶಕ್ತಿಯ ಮುಂದೆ ಅವರ ವಯಸ್ಸು ಪರಿಗಣನೆಗೇ ಬರದಂತಾಗಿದೆ.ಮೊನ್ನೆ ಮೊನ್ನೆ ತಮ್ಮ ಕಚೇರಿ ಸಿಬ್ಬಂದಿಗಳಿಗೇ ಕೋವಿಡ್-೧೯ಪಾಸಿಟಿವ್ ಬಂದ ಬಳಿಕ ಅವರು ಕೇವಲ ಎರಡೇ ಎರಡು ದಿನಗಳಲ್ಲಿ ತಮ್ಮ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾದರು !ಅವರು ವಿಶ್ರಾಂತಿ ಬಯಸಿದ್ದರೆ ಯಾರೂ ಆಕ್ಷೇಪಿಸಲು ಸಾಧ್ಯವಿರಲಿಲ್ಲ.ಈ ವಯಸ್ಸಿನಲ್ಲಿ ಇಂತಹ ದೃಢತೆ ಸಾಮಾನ್ಯ ನಾಯಕರಲ್ಲಿ ಕಾಣಲು ಸಾಧ್ಯವೇ ಇಲ್ಲ.
ಕಳೆದ ವರ್ಷ ಪ್ರವಾಹ ಬಂದಾಗ ಅವರು ಏಕಾಂಗಿಯಾಗಿ ರಾಜ್ಯವ್ಯಾಪಿ ಪ್ರವಾಸ ನಡೆಸಿ ಸಂತ್ರಸ್ತರಿಗೆ ಧೈರ್ಯ-ಸಾಂತ್ವನ ಹೇಳಿದ ಪರಿಯಂತೂ ಅಸಾಮಾನ್ಯವಾದುದು. ಒಬ್ಬ ರಾಜಕಾರಣಿ ಎಂಬುದನ್ನು ಬದಿಗಿಟ್ಟು ನೋಡಿದರೆ ಇದನ್ನು ಯಾರಾದರೂ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಆ ಬಿರುಸಿನ ಮಳೆ-ಪ್ರವಾಹದ ನಡುವೆ ದುರಂತ ನಡೆದ ಸ್ಥಳಗಳಿಗೇ ಖುದ್ದಾಗಿ ಭೇಟಿ ನೀಡಿ ಸಂತ್ರಸ್ತರ ಮೊರೆಯನ್ನು ಅವರು ಶಾಂತವಾಗಿ ಆಲಿಸುತ್ತಿದ್ದರಲ್ಲದೆ ಅವರ ನೋವಿಗೆ ಕರಗಿಹೋಗುತ್ತಿದ್ದರು. ದ.ಕ.ಜಿಲ್ಲೆಯ ಅನೇಕ ಕಡೆಗಳಲ್ಲಿ ಆಗ ಭಾರೀ ಅನಾಹುತಗಳು , ದುರಂತಗಳು ನಡೆದುಹೋಗಿದ್ದವು. ಇದೇ ರೀತಿ ಉತ್ತರ ಕರ್ನಾಟಕ, ಬೆಳಗಾವಿ ಭಾಗಗಳಲ್ಲೂ ಜನ ವಸ್ತುಶಃ ನಲುಗಿ ಹೋಗಿದ್ದರು. ಆ ಎಲ್ಲ ಕಡೆಗಳಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು , ಅಸಹಾಯಕ ಜನರಿಗೆ ನಿಮ್ಮ ಜೊತೆ ನಾನಿದ್ದೇನೆ ಎಂದಿದ್ದರು.ಸ್ಥಳದಲ್ಲೇ ಅನೇಕ ಸಂತ್ರಸ್ತರಿಗೆ ಅವರು ಪರಿಹಾರ ಕಲ್ಪಿಸಿದರು.
ಹೌದು, ಯಡಿಯೂರಪ್ಪ ಬದಲಾಗಿದ್ದಾರೆ.ಮಾಗಿದ್ದಾರೆ.ಸಂಯಮ, ತಾಳ್ಮೆ, ಸಹನೆಯನ್ನು ಬೆಳೆಸಿಕೊಂಡಿದ್ದಾರೆ.ಮುತ್ಸದ್ದಿಯಾಗಿ ಎತ್ತರಕ್ಕೇರಿದ್ದಾರೆ.ವಿರೋಧಪಕ್ಷಗಳು ಟೀಕಿಸಿದಾಗ , ಸುಳ್ಳು ಆರೋಪ ಮಾಡಿದಾಗಲೂ ಅವರೀಗ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆರೋಪಕ್ಕೆ ಪ್ರತ್ಯಾರೋಪ ಮಾಡಲು ಹೋಗುವುದಿಲ್ಲ.ಮಾಧ್ಯಮ ಮತ್ತು ಹೊರಗಿನ ಹಿತಾಸಕ್ತಿಗಳ ಚಿತಾವಣೆಯಿಂದ ಅವರೀಗ ಪ್ರಚೋದಿತರಾಗುವುದಿಲ್ಲ.ಬದಲಿಗೆ ಕರ್ಮಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಜನತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸರಕಾರ ಕಾರ್ಯನಿರ್ವಹಣೆಯನ್ನು ಅದು ಅಭಿವೃದ್ಧಿಗೆ ಎಷ್ಟು ಹಣ ಘೋಷಿಸಿದೆ ಎಂಬುದು ಅದರ ಕ್ಷಮತೆಗೆ ಮಾನದಂಡವಾಗಲು ಸಾಧ್ಯವಿಲ್ಲ.ಬದಲಿಗೆ ಸಂಕಟದ ಸಮಯದಲ್ಲಿ ಅದು ತೋರುವ ಸ್ಪಂದನಶೀಲತೆಯನ್ನು ಆಧರಿಸಿ ಅದರ ಅಂಕವನ್ನು ನಿಗದಿಪಡಿಸಬೇಕಾದ ದಿನಗಳಿವು.ಖಂಡಿತವಾಗಿಯೂ ಕೊರೋನಾ ಬಿಕ್ಕಟ್ಟು, ಪ್ರಾಕೃತಿಕ ವಿಕೋಪಗಳಲ್ಲದೆ ಹೋದಲ್ಲಿ ಯಡಿಯೂರಪ್ಪ ಸರಕಾರದ ಕಾರ್ಯಶೈಲಿಯೇ ಬೇರಿತ್ತು.ಯಾಕೆಂದರೆ ಅವರು ಈ ಬಾರಿ ಅಕಾರ ಚುಕ್ಕಾಣಿ ಹಿಡಿಯುವ ಮುನ್ನವೇ ತಮ್ಮ ಆಡಳಿತಕ್ಕೊಂದು ಟೈಮ್‌ಬೌಂಡ್ ಕಾರ್ಯಸೂಚಿಯನ್ನು ಹಾಕಿಕೊಂಡಿದ್ದರು. ಅವರು ಇದನ್ನು ಆಪ್ತರಬಳಿ ಹಲವು ಬಾರಿ ವ್ಯಕ್ತಗೊಳಿಸಿದ್ದಿದೆ.ರಾಜ್ಯ ಬಿಜೆಪಿ ಸರಕಾರ ಎಂದರೆ ಜನ ನೆಗೆಟಿವ್ ಆಗಿ ಬೆರಳು ಮಾಡಿ ತೋರದಂತಹ ರೀತಿಯಲ್ಲಿರಬೇಕೆಂಬ ಸಂಕಲ್ಪವನ್ನು ಅವರು ಆರಂಭದಲ್ಲೇ ತೊಟ್ಟಿದ್ದರು.ಆದರೆ ಅವರು ಸ್ವಲ್ಪವೂ ವಿಚಲಿತರಾಗಿಲ್ಲ.ಅವರ ದೃಢತೆಯಲ್ಲಿ ವ್ಯತ್ಯಾಸವಾಗಿಲ್ಲ.
ಕೋವಿಡ್ -೧೯ ಹೆಮ್ಮಾರಿಯ ವಿರುದ್ಧದ ಹೋರಾಟದಲ್ಲಿ ಅವರು ತಾವೊಬ್ಬ ದಣಿವರಿಯದ ಜನನಾಯಕ ಎಂದು ತೋರಿಸಿಕೊಟ್ಟಿದ್ದಾರೆ. ಆದರೆ ಇದಿಷ್ಟೇ ಅಲ್ಲ, ಆಡಳಿತ ಯಂತ್ರ ನಿರ್ವಹಣೆಯಲ್ಲಿ ಲೋಪ-ದೋಷಗಳು ಕಂಡುಬಂದಾಗ ಇದನ್ನು ಸರಿಪಡಿಸಲು ಅವರು ಪ್ರಯತ್ನಿಸುತ್ತಿರುವ ರೀತಿ ಗಮನ ಸೆಳೆಯುತ್ತದೆ. ಕೆಲವು ಸಚಿವರ ಕಾರ್ಯವೈಖರಿ ಪರಿಸ್ಥಿತಿಯ ಗಂಭೀರತೆಗೆ ತಕ್ಕಂತೆ ಇಲ್ಲದಾಗ , ತಕ್ಷಣ ಸ್ಪಂದಿಸಿ ಅಕಾರಿಗಳು ಮತ್ತು ಸಚಿವರನ್ನು ಮರು ನಿಯೋಜನೆ ಮಾಡುತ್ತಿರುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅವರ ಕಾರ್ಯಶೈಲಿ ಹೆಚ್ಚು ನವಿರಾಗಿರುವುದನ್ನು ಜನತೆ ಗುರುತಿಸಿದೆ.
ಕಳೆದೊಂದು ವರ್ಷದಲ್ಲಿ ಅವರು ಸಾಗುತ್ತಿರುವ ರೀತಿ ಈ ಹಿಂದಿನ ಅವಗಿಂತ ತೀರಾ ಭಿನ್ನವಾಗಿದೆ.ಅವರಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ತುಡಿತ ಇನಿತೂ ಕಡಿಮೆಯಾಗಿಲ್ಲ. ರಾಜ್ಯ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಅವರ ಕೆಲಸದ ವೈಖರಿಯನ್ನೂ ನೋಡಿದೆ.ಈಗ ರಾಜ್ಯ ಸರಕಾರದ ವಿರುದ್ಧ ಸತತ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ,ತಮ್ಮ ಕ್ಷೇತ್ರದ ಜನ ಅತಿವೃಷ್ಟಿಯಿಂದ ಕಂಗೆಟ್ಟಾಗಲೂ ಹೋಗದೆ ಬೆಂಗಳೂರಿನಲ್ಲಿ ಕುಳಿತಿದ್ದುದನ್ನು ಕಂಡಿದ್ದೇವೆ. ಆದರೆ ಸಂಕಷ್ಟ -ಬಿಕ್ಕಟ್ಟುಗಳು ಬಂದಾಗ ಇನ್ನಷ್ಟು ಕ್ಷಮತೆ-ದೃಢತೆಯೊಂದಿಗೆ , ದಣಿವರಿಯದೆ ದುಡಿಯುವ ಯಡಿಯೂರಪ್ಪ ಅವರನ್ನು ನೋಡಿದಾಗ ಮೆಚ್ಚದಿರಲು ಕಾರಣಗಳಿಲ್ಲ.

Latest Posts

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ; ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಕೋಟ

ಮಂಗಳೂರು: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ನಡೆದ ಪುಂಡಾಟಿಕೆಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ...

Don't Miss

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ದಾಂಧಲೆ; ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ: ಸಚಿವ ಕೋಟ

ಮಂಗಳೂರು: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ನಡೆದ ಪುಂಡಾಟಿಕೆಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ...

ಯುವರತ್ನ ನಾಯಕಿ ಸಾಯೇಷಾ ಲುಕ್ ಮತ್ತು ಪಾತ್ರ ರಿವೀಲ್, ಹೇಗಿದೆ ಗೊತ್ತಾ? ಅವರ ಪಾತ್ರ ಯಾವುದು?

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ  ಬಿಡುಗಡೆಗೆ  ಸಿದ್ಧವಾಗಿದೆ.  ಈಗಾಗಲೇ  ಚಿತ್ರದ  ಪೋಸ್ಟರ್  ಮತ್ತು  ಟೀಸರ್ ಮೂಲಕ  ‘ಭಾರಿ  ನಿರೀಕ್ಷೆ  ಹುಟ್ಟುಹಾಕಿದೆ.  ಸದ್ಯ  ಚಿತ್ರದ  ಲಾಕ್‌ಡೌನ್‌ನಿಂದ  ಶೂಟಿಂಗ್  ಸ್ಥಗಿತಗೊಂಡಿತ್ತು. ಇದ್ದರಿಂದಾಗಿ...

ನೀವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕೆ? ಇಲ್ಲಿದೆ ಅಧಿಕೃತ ಮಾಹಿತಿ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪವಿತ್ರ ನಗರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ದೇಣಿಗೆ ನೀಡುವಂತೆ...
error: Content is protected !!