ಧಾರವಾಡ: ಅನೇಕ ವರ್ಷಗಳಿಂದ ಸ್ಥಳೀಯರಿಂದ ಆಕ್ರಮಿಸಲ್ಪಟ್ಟಿದ್ದ ತಾಲೂಕಿನ ಮುಗದ ಗ್ರಾಮದ ಪೊಲೀಸ್ ಠಾಣೆಯ ಕ್ವಾಟರ್ಸ್ ಜಾಗದ ಸಮೀಕ್ಷೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ನೇತೃತ್ವದಲ್ಲಿ ಶುಕ್ರವಾರ ಪೂರ್ಣಗೊಳಿಸಿ, ಕ್ವಾಟರ್ಸ್ ಗಡಿ ನಿಗದಿಪಡಿಸಿದರು. ಮುಗದ ಗ್ರಾಮದಲ್ಲಿ 1970ರ ದಶಕದಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಒಂದು ಪೊಲೀಸ್ ಠಾಣೆ, ಪಿಎಸ್ಐ ಹಾಗೂ 12 ಜನ ಸಿಬ್ಬಂದಿಗಳ ಕ್ವಾಟರ್ಸ್ ಇತ್ತು. ಕ್ರಮೇಣ ಸ್ಥಳೀಯ ಕ್ವಾಟರ್ಸ್ ಜಾಗೆ ಅತಿಕ್ರಮಣ ಮಾಡಿಕೊಂಡಿದ್ದರು. ಇಂದು ಸರ್ವೇ ಅಧಿಕಾರಿಗಳು ಸಮೀಕ್ಷೆ ನಂತರ ಗಡಿ ನಿರ್ಮಿಸಿದರು.
ಕಳೆದ 15 ವರ್ಷಗಳಿಗೂ ಅಧಿಕ ಸ್ಥಳೀಯ ಕ್ವಾಟರ್ಸ್ ಜಾಗ ಆಕ್ರಮಿಸಿಕೊಂಡ ಅಕ್ರಮವಾಗಿ ವಾಸ ಮಾಡುತ್ತಿದ್ದರು. ಈ ಬಗ್ಗೆ ಅನೇಕ ಸಾರಿ ಮುಗದ ಠಾಣೆ ಸಿಬ್ಬಂದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಸ್ಪಂದಿಸಿರಲಿಲ್ಲ. ಇದೀಗ ಆ ಕಾರ್ಯವನ್ನು ವರ್ತಿಕ ಕಟಿಯಾರ್ ಪೂರ್ಣಗೊಳಿಸಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರದೊಂದಿಗೆ ಮುಗದ ಗ್ರಾಮದ ಪೊಲೀಸ್ ಠಾಣೆ ಒಂದು ಎಕರೆ ಜಾಗವನ್ನು ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣವಾಗಿ ಅಳತೆ ಮಾಡಿ, ಆಕ್ರಮಿಸಿಕೊಂಡ ಸ್ಥಳೀಯರಿಂದ ಪಂಚಾಯಿತಿ ಅಧಿಕಾರಿಗಳೇ ಜಾಗ ತೆರವುಗೊಳಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು. 15 ವರ್ಷ ಮುಗದ ಠಾಣೆಯ ಪೊಲೀಸ್ ಸಿಬ್ಬಂದಿಗಳ ಮನವಿಗೆ ಇದೀಗ ನ್ಯಾಯ ದೊರೆತಂತಾಗಿದೆ. ಸಮೀಕ್ಷೆ ಪೂರ್ಣಗೊಳಿಸಿ ಗಡಿ ನಿರ್ಮಿಸಿದ ಕಾರಣಕ್ಕೆ ಇನ್ಮುಂದೆ ಭವಿಷ್ಯದಲ್ಲಿ ಈ ಠಾಣೆಯ ಜಾಗ ಅತಿಕ್ರಮಿಸುವ ಪ್ರಶ್ನೆಯೇ ಉದ್ಭವಿಸಲಾರದು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.