Wednesday, August 10, 2022

Latest Posts

ಮುಜರಾಯಿ ಇಲಾಖೆಯಿಂದ ದೇವಾಲಯಗಳ ಸೇವೆಗೆ ನೂತನ ಸಾಫ್ಟ್‌ವೇರ್ ಅಭಿವೃದ್ಧಿ

ಸುಬ್ರಹ್ಮಣ್ಯ: ಮುಜರಾಯಿ ಇಲಾಖೆ ತನ್ನದೇ ಆದ ನೂತನ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಿದೆ. ಈ ಕಾರ್ಯವು ಮುಂದಿನ ಒಂದು ತಿಂಗಳ ಒಳಗೆ ಮುಗಿಯಲಿದೆ ಎಂದು  ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳ ಆನ್‌ಲೈನ್ ಸೇವಾ ಬುಕ್ಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಲಿದೆ. ಖಾಸಗಿ ಸಂಸ್ಥೆಗಳಿಗೆ ಬುಕ್ಕಿಂಗ್ ವ್ಯವಸ್ಥೆಯಿಂದ ಸಮಸ್ಯೆ ಸೃಷ್ಠಿ ಆಗುವುದರಿಂದ ಮುಜರಾಯಿ ಇಲಾಖೆಯಿಂದ ನೂತನ ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದರು.
ತಿಂಗಳೊಳಗೆ ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳ ಸೇವೆಗಳನ್ನು ಆನ್‌ಲೈನ್ ಬುಕ್ ಮಾಡುವ ವ್ಯವಸ್ಥೆಗೆ ಮುಜರಾಯಿ ಇಲಾಖೆಯ ನೂತನ ಸಾಫ್ಟ್‌ವೇರ್ ಶೀಘ್ರ ತೆರೆದುಕೊಳ್ಳಲಿದೆ ಎಂದರು.
ಖಾಸಗಿ ಸಂಸ್ಥೆಗಳಿಂದ ಆದಾಯಕ್ಕೆ ಹೊಡೆತ:ಕೊರೋನಾದ ಹಿನ್ನೆಲೆಯಲ್ಲಿ ದೇವಾಲಯಗಳ ಸೇವೆಗಳ ಬುಕ್ಕಿಂಗ್  ಆನ್‌ಲೈನ್ ಮಾಡಬೇಕೆನ್ನುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಸುಮಾರು ೫೪ ದೇವಸ್ಥಾನಗಳಿಗೆ ಆನ್‌ಲೈನ್ ಬುಕ್ಕಿಂಗ್‌ಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಖಾಸಾಗಿ ಸಂಸ್ಥೆಗೆ ೧೫ ಜಿಲ್ಲೆಗಳ ದೇವಸ್ಥಾನಗಳ ಆನ್‌ಲೈನ್ ಸೇವೆ ನಿಗದಿ ಮಾಡುವ ಹಕ್ಕನ್ನು ನೀಡಲಾಗಿತ್ತು. ಆದರೆ ಈ ಖಾಸಗಿ ಸಂಸ್ಥೆಯ ಮೇಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಸೈಬರ್ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿರುವುದರಿಂದ ಈ ಸಂಸ್ಥೆಗೆ ಮತ್ತೆ ಆನ್‌ಲೈನ್ ಸೇವೆ ಬುಕ್ಕಿಂಗ್‌ಗೆ ಅವಕಾಶ ನೀಡುವುದರಿಂದ ದೇವಾಲಯಗಳ ಮೂಲ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಸ್ಥಳಿಯ ಸಾರ್ವಜನಿಕರಿಂದ ದೂರು ಬಂದಿತ್ತು ಎಂದು ವಿವರಿಸಿದರು.
ಕುಕ್ಕೆಯಲ್ಲಿ ಆನ್‌ಲೈನ್ ಸೇವೆ ರದ್ದು: ಆದ್ದರಿಂದ ಕುಕ್ಕೆ ದೇವಳದ ಆನ್‌ಲೈನ್ ಸೇವೆ ಬುಕ್ಕಿಂಗ್ ಮಾಡಲು ಈ ಸಂಸ್ಥೆಗೆ ನೀಡಿದ ಹಕ್ಕನ್ನು ರದ್ದುಪಡಿಸಲಾಗಿದೆ. ಈ ಸಂಸ್ಥೆಯು ಉಚಿತವಾಗಿ ಎಲ್ಲಾ ದೇವಳಗಳ ಆನ್‌ಲೈನ್ ಸೇವೆಯನ್ನು ನಿರ್ವಹಿಸುತ್ತಿದ್ದ ಕಾರಣ ಸರಕಾರವು ಯಾವುದೇ ವೆಚ್ಚವನ್ನು ಸಂಸ್ಥೆಗೆ ನೀಡುತ್ತಿಲ್ಲ ಎಂದು ಮುಜರಾಯಿ ಸಚಿವರು ಸ್ಪಷ್ಟಪಡಿಸಿದರು.
ಶೀಘ್ರ ಸೇವೆಗಳ ದಿನಾಂಕ ಪ್ರಕಟ
ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರವಾಗಿ ದೇವಸ್ಥಾನದಲ್ಲಿ ಸೇವೆಯನ್ನು ಆರಂಭಿಸುವ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು. ಆರೋಗ್ಯ ಇಲಾಖೆಯು ಸೇವೆಗಳಿಗೆ, ಅರ್ಚನೆ, ಪ್ರಸಾದ ವಿತರಣೆ ಇತ್ಯಾದಿಗಳಿಗೆ ಆರೋಗ್ಯ ಇಲಾಖೆಯ ಅನುಮತಿ ಪಡೆದು ವಾರದೊಳಗೆ ಸೇವೆಗಳನ್ನು ಆರಂಭಿಸಲಾಗುವುದು ಎಂದು  ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss