Monday, August 8, 2022

Latest Posts

ಮುಜರಾಯಿ ಇಲಾಖೆ ಎ-ದರ್ಜೆ ದೇವಾಲಯಗಳಿಗೆ ಭದ್ರತೆ ಹೆಚ್ಚಿಸಲು ಅಧಿವೇಶನದಲ್ಲಿ ಪ್ರಸ್ತಾಪ!

ಮಂಡ್ಯ: ಎ-ದರ್ಜೆಯ ಮುಜರಾಯಿ ಇಲಾಖೆ ದೇಗುಲಗಳಲ್ಲಿ ಭದ್ರತೆ ಹೆಚ್ಚಿಸುವ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.
ಭಾನುವಾರ ನಗರದ ಶ್ರೀ ಅರಕೇಶ್ವರ ದೇವಸ್ಥಾನದಲ್ಲಿ ಮೃತ ಅರ್ಚಕ ಕುಟುಂಬಗಳಿಗೆ ವೈಯಕ್ತಿಕವಾಗಿ 10 ಸಾವಿರ ರೂ. ಪರಿಹಾರ ನೀಡಿ ಬಳಿಕ ಮಾತನಾಡಿದ ಅವರು, ಶ್ರೀ ಅರಕೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಮೂವರು ಅರ್ಚಕರ ತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಭದ್ರತೆಯ ಕೊರತೆಯಿಂದಲೇ ಕಳ್ಳರು ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿರುವ ಹುಂಡಿ ಹಣವನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಗಮನಸೆಳೆಯುವುದಾಗಿ ತಿಳಿಸಿದರು.
ಶ್ರೀ ಅರಕೇಶ್ವರಸ್ವಾಮಿ, ಶ್ರೀ ಲಕ್ಷ್ಮೀಜನಾರ್ದನಸ್ವಾಮಿ, ಶ್ರೀ ಶ್ರೀನಿವಾಸ ಸ್ವಾಮಿ ಹಾಗೂ ಕೊಮ್ಮೇರಹಳ್ಳಿಯ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯಗಳು ಎ-ದರ್ಜೆಯ ದೇವಸ್ಥಾನಗಳಾಗಿವೆ. ಈ ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಒದಗಿಸುವ ಅಗತ್ಯವಿದೆ. ಈ ಬಗ್ಗೆ ಮುಜರಾಯಿ ಖಾತೆ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.
ಶ್ರೀ ಅರಕೇಶ್ವರಸ್ವಾಮಿ ದೇಗುಲಕ್ಕೆ ಮುಜರಾಯಿ ಇಲಾಖೆ ವತಿಯಿಂದ ನಾಲ್ವರು ಕಾವಲುಗಾರರನ್ನು ನೇಮಿಸಲು ಅಗತ್ಯ ಕ್ರಮ ವಹಿಸಲಾಗುವುದು. ಬೆಳಗಿನ ವೇಳೆ ಒಬ್ಬರು ಹಾಗೂ ರಾತ್ರಿ ವೇಳೆ ಮೂವರನ್ನು ಭದ್ರತೆ ನಿಯೋಜಿಸಲಾಗುವುದು ಎಂದರು.
ದೇವಾಲಯದ ಕಾಂಪೌಂಡ್‍ಗೆ ಹೊಂದಿಕೊಂಡಿರುವ ಮರಗಳನ್ನು ತೆರವುಗೊಳಿಸುವುದು. ಕಾಂಪೌಂಡ್ ಗೋಡೆಯನ್ನು ಮತ್ತಷ್ಟು ಎತ್ತರಗೊಳಿಸುವುದು. ದೇವಸ್ಥಾನದ ಒಳಭಾಗ ಹಾಗೂ ಸುತ್ತಲೂ 25 ಸೀಸಿ ಟೀವಿ ಕ್ಯಾಮರಾಗಳನ್ನು ಅಳವಡಿಸಿ ಅವು ಸದಾಕಾಲ ಸುಸ್ಥಿತಿಯಲ್ಲಿರುವಂತೆ ಎಚ್ಚರ ವಹಿಸುವುದು. ದೇವಾಲಯದ ಒಳಭಾಗ ಮುರಿದುಬಿದ್ದಿರುವ ಗೇಟ್‍ಗಳನ್ನು ದುರಸ್ತಿಗೊಳಿಸುವುದಾಗಿ ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss