Sunday, August 14, 2022

Latest Posts

ಮುಡಾ ನಿವೇಶನ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ: ಸಚಿವ ಸೋಮಶೇಖರ್

ಹೊಸದಿಗಂತ ವರದಿ, ಮೈಸೂರು:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನಗಳ ಹಗರಣಗಳಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳತ್ತೇವೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಶನಿವಾರ ಮೈಸೂರಿನಲ್ಲಿ ಕೃಷ್ಣಧಾಮಕ್ಕೆ ಭೇಟಿ ನೀಡಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ಮುಡಾ ಹಗರಣಗಳಲ್ಲಿ ಯಾರೇ ಭಾಗಿಯಾಗಿದ್ದರು ಅಂತವರ ವಿರುದ್ದ ಕ್ರಮ ಕೈಗೊಳ್ಳೊದು ನೂರಕ್ಕೆ ನೂರರಷ್ಟು ಸತ್ಯ. ಜಾಗೃತಿ ದಳ,ಡಿವೈಎಸ್ಪಿ ಹಂತದಲ್ಲಿ ಮುಡಾಗೆ ಹಾಕಬೇಕು ಅಂತ ಕೇಳಿದ್ದೇವೆ. ಮುಡಾ ಅಧ್ಯಕ್ಷರ ಜೊತೆ ಗೃಹ ಸಚಿವರಿಗೆ ಜಂಟಿಯಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ. ಶುಕ್ರವಾರ ರಾತ್ರಿ ಮೈಸೂರು ನಗರ ಪೊಲೀಸ್ ಕಮಿಷನರ್ ಭೇಟಿ ಮಾಡಿ, ಮಾತನಾಡಿ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರು ಯಾರಿದ್ದಾರೆ, ಎಷ್ಟೇ ದೊಡ್ಡವರು ಆಗಿರಲಿ, ಯಾವುದೇ ಬ್ಯಾಗ್ರೌಂಡ್ ಇದ್ರೂ ಅಂತವರನ್ನು ಅರೆಸ್ಟ್ ಮಾಡಿ. ಹಗರಣಕ್ಕೆ ಸಂಭoದಪಟ್ಟoತೆ ಯಾರೇ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಪೋರ್ಟ್ ಮಾಡಿದ್ದರೂ ಅಂತವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇವೆ ಎಂದರು.
ಸೋಮವಾರದಿoದ ಕೊರೋನಾ ಲಸಿಕೆ ನೀಡಲಿದ್ದೇವೆ. ರಾಜ್ಯದ 5 ಕೇಂದ್ರಗಳಲ್ಲಿ ಮೈಸೂರು ಸಹ ಒಂದು. ಮೈಸೂರಿನಲ್ಲೂ ಲಸಿಕೆ ವಿತರಣೆಯಾಗಲಿದೆ. ಆಶಾ ಕಾರ್ಯಕರ್ತರು,ವೈದ್ಯರು ಸೇರಿದಂತೆ ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು. ಈ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಶಾಸಕ ಎಲ್.ನಾಗೇಂದ್ರ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss