Thursday, July 7, 2022

Latest Posts

ಮುಡಿಪುವಿನಲ್ಲಿ ಅತಂತ್ರರಾಗಿದ್ದ ಮಕ್ಕಳಿಗೆ ದಾರಿ ತೋರಿದ ಹಿಂದೂ ಸಂಘಟನೆ ಯುವಕರು!

ಕೊಣಾಜೆ: ಕೊಪ್ಪಲ‌ ಜಿಲ್ಲೆಯಿಂದ ಬಂದು ಮುಡಿಪುವಿನಲ್ಲಿ ಉಳಿದುಕೊಂಡು ಬಂದ್ ನಿಂದಾಗಿ‌ ಸಂಕಷ್ಡದಲ್ಲಿದ್ದ ಮಕ್ಕಳಿಗೆ ಮುಡಿಪುವಿನ ಹಿಂದೂ ಸಂಘಟನೆಯೊಂದರ ಸದಸ್ಯರು ಊರಿಗೆ ತೆರಳಲು ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟು‌ ಮಾನವೀಯತೆ ಮೆರೆದಿದ್ದಾರೆ‌
ಕೊಪ್ಪಲದಿಂದ‌ ಬಂದಿದ್ದ ಕುಟುಂಬ ಕಳೆದ‌ ಹಲವಾರು ತಿಂಗಳಿಂದ ಮುಡಿಪುವಿನಲ್ಲೆ ಇದ್ದುಕೊಂಡು ಮನೆ ಮನೆಗೆ ಹೋಗಿ ಭಜನೆ ಮಾಡುವುದರೊಂದಿಗೆ ದಿನ ಕಳೆಯುತ್ತಿದ್ದರು. ಇತ್ತೀಚೆಗೆ ಕುಟುಂಬದ ಹಿರಿಯರೆಲ್ಲರೂ ಮಕ್ಕಳನ್ನು ಇಲ್ಲೇ ಬಿಟ್ಟು ಕೊಪ್ಪಳದ‌ ತಮ್ಮ ಊರಿಗೆ ರೇಷನ್ ಕಾರ್ಡ್ಗೆ‌ ತಂಬ್ ನೀಡಲೆಂದು‌ ತೆರಳಿದ್ದರು‌ ಎನ್ನಲಾಗಿದೆ. ಆದರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕೊರೊನದಿಂದಾಗಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಪೋಷಕರು ಬರಲಾಗದೆ  ಕಳೆದ‌ಹಲವಾರು ದಿನಗಳಿಂದ ಮಕ್ಕಳು ಇಲ್ಲೇ ಅತಂತ್ರರಾಗಿದ್ದರು. ಇದನ್ನು ಮನಗಂಡ ಮುಡಿಪುವಿನ ಮತ್ತು ದೇವಿನಗರದ ಬಜರಂಗದಳದ  ಯುವಕರು ಸ್ಥಳೀಯರ ನೆರವಿನೊಂದಿಗೆ ವಾಹನ ವ್ಯವಸ್ಥೆಯನ್ನು ಮಾಡಿ ಕೊಣಾಜೆ ಠಾಣೆಯಲ್ಲಿ ವಾಹನ ಸಂಚಾರಕ್ಕೆ ಪಾಸ್ ಪಡೆದು ಮಕ್ಕಳನ್ನು ಕೊಪ್ಪಲಕ್ಕೆ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss