Friday, January 22, 2021

Latest Posts

ಮುದಗೆರೆ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಜಯರಾಮ – ಉಪಾಧ್ಯಕ್ಷರಾಗಿ ರೇವಹೆಗ್ಗಡೆ ಆಯ್ಕೆ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯರಾಮು ಎಂ.ಹೆಚ್ ಮತ್ತು ಉಪಾಧ್ಯಕ್ಷರಾಗಿ ಕೆ.ರೇವಹೆಗ್ಗಡೆ ಅವರು ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯರಾಮು ಎಂ.ಹೆಚ್. ಮತ್ತು ಎಂ.ಸಿ.ಶಿವರಾಮು ಅವರು ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಜಿದ್ದಾಜಿದ್ದಿ ನಡೆದ ಚುನಾವಣೆಯಲ್ಲಿ ಜಯರಾಮು ಎಂ.ಹೆಚ್. ಅವರು ೮ ಮತಗಳನ್ನು ಪಡೆದು ವಿಜಯದ ನಗೆ ಬೀರಿದರೆ ಪ್ರತಿಸ್ಪರ್ಧಿ ಎಂ.ಸಿ.ಶಿವರಾಮು ಅವರು ೫ ಮತಗಳನ್ನು ಪಡೆದು ಪರಾಭವಗೊಂಡರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ರೇವಹೆಗ್ಗಡೆ ಅವರು ೭ ಮತಗಳನ್ನು ಪಡೆದು ಜಯಗಳಿಸಿದರೆ ಅವರ ಪ್ರತಿಸ್ಪರ್ಧಿ ಬಿಂದು.ಎ.ಆರ್. ಅವರು ೬ ಮತಗಳನ್ನು ಪಡೆದು ಸೋಲನುಭವಿಸಿದರು. ಚುನಾವಣೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಪಿ.ಲೋಕೇಶ್, ಇಂದ್ರ, ನಾಥೇಗೌಡ,ದೀಪು, ನಾರಾಯಣ, ಶಿವರಾಮು ಕೆ.ಸಿ. ರಾಮಕೃಷ್ಣ, ಉಮೇಶ್ ಹಾಗೂ ಬಿ.ಆರ್.ಆರ್.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಪುರುಷೋತ್ತಮ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಭಿನಂದನೆ: ನೂತನ ಅಧ್ಯಕ್ಷ ಜಯರಾಮು ಎಂ.ಹೆಚ್. ಹಾಗೂ ಉಪಾಧ್ಯಕ್ಷ ಕೆ.ರೇವಹೆಗ್ಗಡೆ ಅವರನ್ನು ಜೆಡಿಎಸ್ ವಕ್ತಾರ ಜಯಕುಮಾರ್, ಡೈರಿ ಅಧ್ಯಕ್ಷ ಅರ್ಕೇಶ್, ಮುಖಂಡರಾದ ಬೆಳಕೆರೆ ಬಿ.ಎಂ. ಕುಮಾರ್, ಎಸ್.ವಿ.ಟಿ.ವೆಂಕಟೇಶ್, ಬಿ.ಎನ್.ನಾಗೇಶ್, ಸಂತೋಷ್, ಮಹೇಶ್ ಸೇರಿದಂತೆ ಹಲವರು ಹಾಗೂ ಸಂಘದ ಸಿಇಓ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದರು. ಸೊಸೈಟಿ ಅಭಿವೃದ್ಧಿ ಪಡಿಸಿ ರೈತರಿಗೆ ಅನುಕೂಲ ಕಲ್ಪಿಸುವುದು ನನ್ನ ಆಧ್ಯತೆ: ಅಧ್ಯಕ್ಷ ಜಯರಾಮು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಅಭಿವೃದ್ಧಿ ಪಡಿಸಿ, ರೈತರಿಗೆ ಅನುಕೂಲ ಕಲ್ಪಿಸಿ ಕೊಡುವುದು ನನ್ನ ಮೊದಲ ಆಧ್ಯತೆ ಎಂದು ನೂತನ ಅಧ್ಯಕ್ಷ ಜಯರಾಮು ಎಂ.ಹೆಚ್.ಅವರು ತಿಳಿಸಿದರು. ಪತ್ರಿಕೆ ಜೊತೆ ಮಾತನಾಡಿದ ಅವರು ನಾನು ಕಳೆದ ೨ ಬಾರೀ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದು ಸಂಘದಲ್ಲಿ ಈಗಾಗಲೇ ಪಿಗ್ಮಿ ಸಂಗ್ರಹ, ದಿನ ಬಳಕೆ ಸಾಲ, ಚಿನ್ನದ ಮೇಲೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಂಘದ ಜಾಗ ಈಗಲೂ ದಾನ ಕೊಟ್ಟವರ ಹೆಸರಿನಲ್ಲೇ ಇದೆ. ಅದನ್ನು ಸಂಘದ ಆಸ್ತಿಯನ್ನಾಗಿ ಮಾಡಿ ಬಜಾರ್ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸುವುದು, ಮಂಕುAದ ಗ್ರಾಮದಲ್ಲಿರುವ ಸಂಘದ ಆಸ್ತಿ/ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಸಂಘದ ಸದಸ್ಯರಿಗೆ ಅನುಕೂಲದ ಜೊತೆಗೆ ಸಾಲ ಸೌಲಭ್ಯಗಳನ್ನು ದೊರಕಿಸಿ ಕೊಟ್ಟು ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಸಹಕಾರಿ ಕ್ಷೇತ್ರಕ್ಕೆ ರಾಜಕೀಯ ಪ್ರವೇಶ ಮಾಡಬಾರದು. ರಾಜಕೀಯ ಪ್ರವೇಶ ಮಾಡಿ ಇಲ್ಲದ ಗೊಂದಲ, ಗುಂಪುಗಾರಿಕೆ ಸೃಷ್ಠಿ ಮಾಡಿ ಚುನಾವಣೆಗೆ ಎಡೆಮಾಡಿಕೊಟ್ಟು ಸಾರ್ವಜನಿಕರ ಹಣ/ ಸಂಘದ ಲಕ್ಷಾಂತರ ರೂ. ಹಣ ವಿನಾಕಾರಣ ವ್ಯಯವಾಗುವಂತೆ ಮಾಡುವುದರಿಂದ ಸಹಕಾರಿ ಸಂಸ್ಥೆಗಳು ಲಾಭದತ್ತ ಮುನ್ನಡೆಯಲು ಹೇಗೆ ಸಾಧ್ಯ. ಇದರಿಂದ ಮುಂದೆ ಸಹಕಾರಿ ಕ್ಷೇತ್ರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ನೂತನ ಅಧ್ಯಕ್ಷ ಜಯರಾಮು ಎಂ.ಹೆಚ್. ಬೇಸರ ವ್ಯಕ್ತಪಡಿಸಿದರು. ಸಹಕಾರ ಸಂಘಗಳಿAದ ಬಿಡಿಸಿಸಿ ಚುನಾವಣೆಯಲ್ಲಿ ಮತದಾನದ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಆಕಾಂಕ್ಷಿಗಳು ಪ್ರವೇಶ ಮಾಡಿ, ಸಂಘಗಳನ್ನು ಸೂಪರ್ ಸೀಡ್ ಮಾಡುವುದು, ಅಶಾಂತಿ, ಚುನಾವಣೆಗೆ ಅವಕಾಶ ಮಾಡಿಕೊಟ್ಟು ಪರಸ್ಪರ ವೈಷಮ್ಯ ಬೆಳೆಯುವಂತೆ ಮಾಡುವುದರ ಜೊತೆಗೆ ಸಾರ್ವಜನಿಕರು ಮತ್ತು ಸಂಘದ ಲಕ್ಷಾಂತರ ಹಣ ಖರ್ಚು ಆಗುವಂತೆ ಮಾಡುವುದು ಸರಿಯಲ್ಲ. ಸಂಘದ ಚುನಾವಣೆಗೆ ರಾಜಕೀಯ ಬೆರೆಸಬಾರದು. ಅವರಿಗೆ ನಿಜವಾಗಿಯೂ ಇಚ್ಚಾಸಕ್ತಿ ಇದ್ದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧ ಆಯ್ಕೆಗೆ ಮುಂದಾಗಿ ವಿನಾಕಾರಣ ಖರ್ಚಾಗುವ ಲಕ್ಷಾಂತರ ಹಣವನ್ನು ಸಂಘಗಳ ಅಭಿವೃದ್ಧಿಗೆ ವಿನಿಯೋಗಿಸಿ ರೈತರಿಗೆ ಅನುಕೂಲ/ಸೌಲಭ್ಯಗಳನ್ನು ಕಲ್ಪಿಸಿಕೊಡಲು ಚಿಂತನೆ ಮಾಡಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಜಯಕುಮಾರ್ (ಜೆ.ಕೆ) ಅವರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!