ಹೊಸದಿಗಂತ ಆನ್ ಲೈನ್ ಡೆಸ್ಕ್:
ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಜೋಡಿ ಕಳೆದ ವರ್ಷ ಆಗಸ್ಟ್ ನಲ್ಲಿ ಹೇಳಿಕೊಂಡಿತ್ತು. ಈ ನಡುವೆ ಅನುಷ್ಕಾ ವೈದ್ಯಕೀಯ ತಪಾಸಣೆಗೆ ತೆರಳುತ್ತಿರುವ ಚಿತ್ರ ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತಲ್ಲದೆ, ಈ ಸಂದರ್ಭ ಆಕೆ ಧರಿಸಿದ್ದ ಕಪ್ಪು ಬಣ್ಣದ ಅಂಗಿಯ ಬಗ್ಗೆಯೂ ವ್ಯಾಪಕ ಚರ್ಚೆಗಳಾಗಿದ್ದವು. ಇದರ ನಡುವೆಯೇ ಇಂದು ಸಂಜೆ ತಮಗೆ ಹೆಣ್ಣು ಮಗು ಹುಟ್ಟಿರುವುದಾಗಿ ಕೊಹ್ಲಿ ಖುದ್ದಾಗಿ ಟ್ವಿಟ್ ಮಾಡಿ ಹೇಳಿಕೊಂಡಿದ್ದಾರೆ.
— Virat Kohli (@imVkohli) January 11, 2021