ಹೊಸ ದಿಗಂತ ವರದಿ, ಮೈಸೂರು:
ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರ ಭರ್ಜರಿ ಗೆಲುವು ಪಕ್ಷದ ಹಾಗೂ ಅಭಿವೃದ್ಧಿಯ ಗೆಲುವಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಮುನಿರತ್ನ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಕೈ ಹಿಡಿದಿದ್ದಾರೆ. ಇದನ್ನು ಪಕ್ಷದ ಹಾಗೂ ಅಭಿವೃದ್ಧಿಯ ಗೆಲುವೆಂದು ನಾನು ಹೇಳುತ್ತೇನೆ. ನಾನು ಈ ಮೊದಲೇ ಹೇಳಿದ ಹಾಗೆ ಭಾರಿ ಅಂತರದಲ್ಲಿ ಮುನಿರತ್ನ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.