ಮಂಗಳೂರು: ಪ್ರತಿಪಕ್ಷ ನಾಯಕರು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ತಾಯಿ ಬಗ್ಗೆ ಮಾತನಾಡಿದ್ದಕ್ಕೆ ಮುನಿರತ್ನ ಅವರು ಕಣ್ಣೀರು ಹಾಕಿದ್ದು, ಇದಕ್ಕೆ ಪ್ರತಿಕ್ರಿಯಿಸಿ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ. ಹಾಗಾಗಿ ನಟನೆ ಅವರಿಗೆ ಹೊಸದಲ್ಲ. ಇಂದು ಕಣ್ಣೀರು ಹಾಕಿ ‘ಕರುಣಾ’ ರಸವನ್ನು ಹೊರ ಹಾಕಿ ನಟಿಸಿದ್ದಾರೆ ಎಂದು ಟ್ವೀಟ್ ನಲ್ಲಿ ವ್ಯಂಗ್ಯ ಮಾಡಿದ್ದಾರೆ.
ಈಗಾಗಲೇ ಮುನಿರತ್ನರ ‘ಭೀಭತ್ಸ’, ‘ರೌದ್ರ’ ಮತ್ತು ‘ಭಯಾನಕ’ ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ. ಫಲಿತಾಂಶ ಬಂದ ನಂತರ ‘ಶಾಂತ’ ರಸ ಹೊರಬರಲಿದೆ ಎಂದು ಕೂಡಾ ಅವರು ಟೀಕೆ ಮಾಡಿದ್ದಾರೆ.
ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ.
ಹಾಗಾಗಿ ನಟನೆ ಅವರಿಗೆ ಹೊಸದಲ್ಲ.ಇಂದು ಕಣ್ಣೀರು ಹಾಕಿ 'ಕರುಣಾ' ರಸವನ್ನು ಹೊರ ಹಾಕಿ ನಟಿಸಿದ್ದಾರೆ.
ಈಗಾಗಲೇ ಮುನಿರತ್ನರ 'ಭೀಭತ್ಸ', 'ರೌದ್ರ' ಮತ್ತು 'ಭಯಾನಕ' ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ.ಫಲಿತಾಂಶ ಬಂದ ನಂತರ 'ಶಾಂತ' ರಸ ಹೊರಬರಲಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 28, 2020