ಮುಲ್ಕಿ: ಮೂಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ, ಜಿಎಸ್ ಬಿ ಧುರೀಣ ಹಳೆಯಂಗಡಿ ನರಸಿಂಹ ಕಾಮತ್ (73) ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅವರು ದಿಲ್ಲಿ, ಮುಂಬೈ, ಮಂಗಳೂರು, ಬೆಂಗಳೂರು ಸಹಿತ ಅನೇಕ ಕಡೆಗಳಲ್ಲಿ ಕೆನರಾ ಬ್ಯಾಂಕಿನ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞರು ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ,ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಹಳೆಯಂಗಡಿ ಪಿ ಸಿ ಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಕೆಪಿಸಿಸಿ ಸದಸ್ಯ ವಸಂತ ಬರ್ನಾಡ್ ಹಳೆಯಂಗಡಿ, ಸಾಹುಲ್ ಹಮೀದ್ ಕದಿಕೆ. ಪರ್ತಕರ್ತ ಪುನೀತ್ ಕೃಷ್ಣ, ಗೌತಮ್ ಜೈನ್ ಮುಲ್ಕಿ ಅರಮನೆ ಸಂತಾಪ ವ್ಯಕ್ತ ಪಡಿಸಿದ್ದಾರೆ.