ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮುಳ್ಳೇರಿಯ ಪರಿಸರದಲ್ಲಿ ಸೋಲಾರ್ ಬೇಲಿ ಮುರಿದು ಮತ್ತೆ ಬಂದ ಕಾಡಾನೆಗಳು: ವ್ಯಾಪಕ ಕೃಷಿ ನಾಶ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯ ಮುಳ್ಳೇರಿಯ ಪರಿಸರದಲ್ಲಿ ನಾಗರಿಕರು ಹಾಗೂ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆ ಸಂಯುಕ್ತವಾಗಿ ಅನೇಕ ದಿನಗಳಿಂದ ನಡೆಸಿದ ಕಠಿಣ ಪ್ರಯತ್ನದ ಮೂಲಕ ಕರ್ನಾಟಕದ ಅರಣ್ಯದತ್ತ ಓಡಿಸಿದ ಕಾಡಾನೆಗಳು ಮತ್ತೆ ಮರಳಿ ಬಂದಿವೆ. ಅಲ್ಲದೆ ವಿವಿಧೆಡೆ ಕೃಷಿ ವಲಯವನ್ನು ಸಂಪೂರ್ಣವಾಗಿ ನಾಶಗೊಳಿಸಿವೆ. ಇದೇ ವೇಳೆ ಸೋಲಾರ್ ಬೇಲಿಗಳನ್ನು ಮುರಿದು ಕಾಡಾನೆಗಳು ದಾಳಿಯಿಟ್ಟಿವೆ.
ಮುಳ್ಳೇರಿಯ ಸಮೀಪದ ಕೆಲವು ಜನವಾಸ ಪ್ರದೇಶಕ್ಕೆ ತಲುಪಿದ ಆರು ಕಾಡಾನೆಗಳು ವ್ಯಾಪಕ ಕೃಷಿ ನಾಶಗೈದಿವೆ. ಹಲವು ಮಂದಿ ಕೃಷಿಕರ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ಕೃಷಿಯನ್ನು ನಾಶಗೊಳಿಸಿ ಕೃಷಿಕರ ಕಣ್ಣಲ್ಲಿ ನೀರು ಬರುವಂತೆ ಮಾಡಿವೆ. ಕಳೆದ ಎರಡು ದಿನಗಳಲ್ಲಿ ಅಡಿಕೆ ಮರಗಳು, ತೆಂಗುಗಳು, ಬಾಳೆಗಿಡಗಳನ್ನು ನಾಶಗೊಳಿಸಿದ ಕಾಡಾನೆಗಳು ನೀರಾವರಿ ಅಗತ್ಯಗಳಿಗಾಗಿ ಸ್ಥಾಪಿಸಿದ ಪೈಪ್ ಗಳನ್ನು ಹಾನಿಗೈದಿವೆ. ಧಾರಾಕಾರ ಮಳೆ ಸುರಿಯುತ್ತಿದ್ದ ಕಾರಣ ಆನೆಗಳು ತೋಟಕ್ಕೆ ದಾಳಿ ನಡೆಸಿರುವುದು ಕೃಷಿಕರ ಗಮನಕ್ಕೆ ತಕ್ಷಣ ಬಂದಿಲ್ಲ. ಇತ್ತೀಚೆಗೆ ಭಾರೀ ಪ್ರಯತ್ನ ನಡೆಸಿ ಆನೆಗಳನ್ನು ಕರ್ನಾಟಕದ ದಟ್ಟಾರಣ್ಯದತ್ತ ಓಡಿಸಲಾಗಿತ್ತು. ಅನಂತರ ಅಡೂರು, ಪುಲಿಪ್ಪರಂಬ್ ಮೊದಲಾದ ಪ್ರದೇಶಗಳಲ್ಲಿ ಸೋಲಾರ್ ಬೇಲಿ ಸ್ಥಾಪಿಸಲಾಗಿತ್ತು. ಆದರೆ ಕೆಲವೇ ದಿನಗಳೊಳಗೆ ಕಾಡಾನೆಗಳು ಸೋಲಾರ್ ಬೇಲಿ ಮುರಿದು ಕೇರಳ ಅರಣ್ಯ ಮೂಲಕ ಜನವಾಸ ಕೇಂದ್ರಗಳಿಗೆ ಆಗಮಿಸಿ ಕೃಷಿ ನಾಶಗೊಳಿಸಿವೆ. ಆನೆಗಳು ಮತ್ತೆ ಬಂದಿರುವುದು ಕೃಷಿಕರಲ್ಲಿ ಆತಂಕ ಮೂಡುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಇನ್ನಾದರೂ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಕಾಸರಗೋಡು ಜಿಲ್ಲೆಯ ಕೃಷಿಕರು ಕೇರಳ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss