Wednesday, June 29, 2022

Latest Posts

ಮುಸ್ಲಿಂಲೀಗ್ ಸಹೋದರಿಯರು ಸಹಿತ ಹಲವು ಮಂದಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಹೊಸ ದಿಗಂತ ವರದಿ, ಕಾಸರಗೋಡು:

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವಂತೆಯೇ ಚೆಮ್ನಾಡು ಗ್ರಾಮ ಪಂಚಾಯತ್ ನ 10ನೇ ವಾರ್ಡ್ ಪೊಯಿನಾಚಿಯ ಮುಸ್ಲಿಂಲೀಗ್ ಸಹೋದರಿಯರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ರಾಜೀನಾಮೆ ನೀಡಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿಗೆ ಭಾನುವಾರ ಸೇರ್ಪಡೆಗೊಂಡರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಬೆಂಬಲಿಸಿ ಹಾಗೂ ಬಿಜೆಪಿಯ ತತ್ವ ಸಿದ್ಧಾಂತಗಳಿಗೆ ಸಂಪೂರ್ಣ ಒಪ್ಪಿಗೆ ನೀಡಿ ವಿವಿಧ ರಾಜಕೀಯ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಶಾಲು ಹೊದಿಸಿ ಸ್ವಾಗತಿಸಿ ಬರಮಾಡಿಕೊಂಡರು. ಜಿಲ್ಲಾ ಸೆಲ್ ಕೋ ಓರ್ಡಿನೇಟರ್ ಎನ್.ಬಾಬುರಾಜ್, ಉದುಮ ಮಂಡಲ ಅಧ್ಯಕ್ಷ ಕೆ.ಟಿ.ಪುರುಷೋತ್ತಮನ್, ಮಂಡಲ ಉಪಾಧ್ಯಕ್ಷ ಎಂ.ಸದಾಶಿವನ್, ಸುರೇಶ್ ಬಾಬು ಪೊಯಿನಾಚಿ, ಕಾರ್ತ್ಯಾಯಿನಿ, ಜಯಚಂದ್ರನ್ ಸನ್ನಿದಾನಮ್, ಮಧು ಮಂಡಲಿಪ್ಪಾರ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss