Thursday, August 18, 2022

Latest Posts

ಮೂರನೇ ಟೆಸ್ಟ್ ಪಂದ್ಯ: ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 2 ವಿಕೆಟ್ ಗೆ 166 ರನ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ ನೀಡಿದ ಭಾರತೀಯ ಬೌಲರ್ ಗಳು , ಡೇವಿಡ್ ವಾರ್ನರ್ ಕೇವಲ 5 ರನ್​ ಗಳಿಸಿ ಪೆವಿಲಿಯನ್ ಯತ್ತ ಕಳುಹಿಸಿದರು . ಬಳಿಕ ಮಳೆಯ ಕಾರಣ ಸುಮಾರು 4 ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಂಡಿತ್ತು.
ಮತ್ತೆ ಮೊದಲ ವಿಕೆಟ್ ಪತನವಾದ ನಂತರ ಜೊತೆಯಾದ ವಿಲ್​ ಪುಕೋವ್​ಸ್ಕಿ ಮತ್ತು ಲಾಬುಶೇನ್ ಆಸೀಸ್ ತಂಡಕ್ಕೆ ಆಸರೆಯಾದರು. ವಿಲ್​ ಪುಕೋವ್​ಸ್ಕಿ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು.
ಬಳಿಕ ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ನವದೀಪ್ ಸೈನಿ ಬೌಲಿಂಗ್ ಗೆ ಪುಕೋವ್​ಸ್ಕಿ (62) ಅವರನ್ನು ಎಲ್​ಬಿ ಗೆ ಔಟ್ ಆದರು.
ನಂತರ ಜೊತೆಯಾದ ಲಾಬುಶೇನ್ ಮತ್ತು ಸ್ಮಿತ್​ ಉತ್ತಮವಾಗಿ ಬ್ಯಾಟ್ ಬೀಸಿದರು.
ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 164 ರನ್​ ಗಳಿಸಿದ್ದು, ಸ್ಟೀವ್ ಸ್ಮಿತ್ 31 ರನ್ ಮತ್ತು ಲಾಬುಶೇಲ್ 67 ರನ್​ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಸೈನಿ ಮತ್ತು ಸಿರಾಜ್ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!