Wednesday, July 6, 2022

Latest Posts

ಮೂರು ಕೋಟಿ ಮೌಲ್ಯದ 6ಕೆ.ಜಿ ಚಿನ್ನ ಪೊಲೀಸರ ವಶಕ್ಕೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆ. ಆರ್. ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುಂಬೈ ಮೂಲದ ದಲ್ವತ್ ಸಿಂಗ್ (34) ರಾಜಸ್ಥಾನದ ವಿಕಾಸ್(35) ಎಂದು ಗುರುತಿಸಲಾಗಿದ್ದು, ಇವರಿಂದ ಬರೋಬ್ಬರಿ 6.55 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೊರಿಯರ್ ಬ್ಯಾಗ್ ನಲ್ಲಿ ಚಿನ್ನಗಳನ್ನು ಸಾಗಾಟ ಮಾಡುತ್ತಿದ್ದರು. ವಶಪಡಿಸಿಕೊಳ್ಳಾದ ಸೊತ್ತಿಗಳಲ್ಲಿ 7 ಜೊತೆ ಬಳೆ, 65 ನೆಕ್ಲೆಸ್ 150 ಗ್ರಾಂ ನ ಓಲೆ ಸಹಿತ 6.55 ಕೆಜಿ ತೂಕದ ಚಿನ್ನಾಭರಣ ಇದ್ದವು. ಇವುಗಳ‌ ಮೌಲ್ಯ 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss