Monday, August 8, 2022

Latest Posts

ಮೂರು ಗಂಟೆಯಲ್ಲೇ ದಾಖಲೆಯ ಬರೋಬ್ಬರಿ ಏಳು ಮಸೂದೆಗಳ ಅಂಗೀಕಾರ!

ಹೊಸದಿಲ್ಲಿ: ಒಂದೆಡೆ ಪ್ರತಿಪಕ್ಷಗಳು ಕೇಂದ್ರ ಸರಕಾರದ ಮಸೂದೆಗಳನ್ನು ವಿರೋಧಿಸಿ ಕಲಾಪ ಬಹಿಷ್ಕರಿಸಿದರೆ , ಇತ್ತ ಕೇಂದ್ರ ಸರಕಾರ ಮಂಗಳವಾರ ಮೂರು ಗಂಟೆಯಲ್ಲೇ ದಾಖಲೆಯ ಬರೋಬ್ಬರಿ ಏಳು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದೆ.
ಪ್ರತಿಪಕ್ಷಗಳ ಅನುಪಸ್ಥಿತಿಯ ಮಧ್ಯೆ, ಮೂರು ಗಂಟೆಗಳ ಅವಧಿಯಲ್ಲಿ ರಾಜ್ಯಸಭೆಯು ಆರು ನಿರ್ಣಾಯಕ ಮಸೂದೆಗಳನ್ನು ಇಂದು ಅಂಗೀಕರಿಸಿತು.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮಸೂದೆ 2020, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020, ಕಂಪನಿಗಳ (ತಿದ್ದುಪಡಿ) ಮಸೂದೆ 2020, ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020, ಅಗತ್ಯ ಸರಕುಗಳ(ತಿದ್ದುಪಡಿ) ಮಸೂದೆ 2020 ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಿದ್ದುಪಡಿ (ತಿದ್ದುಪಡಿ) ಮಸೂದೆ 2020 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.
ನಿನ್ನೆ ತಡರಾತ್ರಿ 2020ರ ಸಾಂಕ್ರಾಮಿಕ ರೋಗಗಳ(ತಿದ್ದುಪಡಿ) ಮಸೂದೆ ಲೋಕಸಭೆಯ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದ್ದು, ಇದನ್ನು ಸಹ ಇಂದೇ ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss