Friday, August 12, 2022

Latest Posts

ಮೂರು ತಿಂಗಳ ಬಳಿಕ ಕಾಕನಕೋಟೆಯಲ್ಲಿ ಸಫಾರಿ ಪುನರಾರಂಭ: ವನ್ಯಜೀವಿಗಳ ದರ್ಶನ ಕಂಡು ಹರ್ಷರಾದ ಪ್ರವಾಸಿಗರು!

ಮೈಸೂರು: ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿರುವ ನಾಗರಹೊಳೆಯ ಕಾಕನಕೋಟೆ ಸಫಾರಿ ಇದೀಗ ಪುನರಾರಂಭವಾಗಿದೆ. ಮಹಾಮಾರಿ ಕೊರೋನಾ ವೈರಾಣು ಮೈಸೂರು ಜಿಲ್ಲೆಯಲ್ಲಿ, ಅದರಲ್ಲೂ ಎಚ್.ಡಿ.ಕೋಟೆ ತಾಲೂಕಿನಲ್ಲಿ ತೀವ್ರವಾಗಿ ಹರಡುತ್ತಿದ್ದ ಕಾರಣ ಎಲ್ಲಾ ವನ್ಯಜೀವಿಧಾಮದೊಳಗೆ ನಡೆಸುತ್ತಿದ್ದ ಸಫಾರಿಯನ್ನು ರದ್ದುಪಡಿಸಿ, ಪ್ರವಾಸಿಗರ ಭೇಟಿ, ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ನಿರ್ಬಂಧವನ್ನು ಹಿಂತೆಗೆದುಕೊoಡಿದ್ದಾರೆ. ಹಾಗಾಗಿ ಕಾಕನಕೋಟೆಯಲ್ಲಿ ಸಫಾರಿಯನ್ನು ಮತ್ತೆ ಪ್ರಾರಂಭಿಸಲಾಗಿದೆ.
ಮೂರು ತಿಂಗಳು ಬಳಿಕ ಪ್ರಾರಂಭವಾದ ಮೊದಲ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿಯ ದರ್ಶನ ಭಾಗ್ಯ ಸಿಕ್ಕಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಕಾಲ ಕಳೆದಿದ್ದ ಪ್ರವಾಸಿಗರ ಕಣ್ಣುಗಳಿಗೆ ಇಂದಿನ ಸಫಾರಿ ಹಚ್ಚ ಹಸಿನ ಅರಣ್ಯ ಸೌಂದರ್ಯವನ್ನು ಕಣ್ತುಂಬುವAತೆ ಮಾಡಿದೆ. ಅಲ್ಲದೇ ಸಫಾರಿಯಲ್ಲಿ ಪ್ರವಾಸಿಗರು ಹುಲಿ, ಜಿಂಕೆ, ಕಾಡೆಮ್ಮೆ, ಆನೆ ಹಾಗೂ ವಿವಿಧ ಜಾತಿಯ ಹದ್ದುಗಳು ಮತ್ತು ಪಕ್ಷಿಗಳನ್ನು ನೋಡಿ ಸಂತಸ ಪಟ್ಟು, ತಮ್ಮ ಮೊಬೈಲ್, ಕ್ಯಾಮೆರಗಳಲ್ಲಿ ಸೆರೆಹಿಡಿದುಕೊಂಡರು.
ಕಾಕನಕೋಟೆ ಸಫಾರಿಯು ಹೆಚ್ಚು ಬೇಡಿಕೆಯಿಂದ ಕೂಡಿದ್ದು, ಹೆಚ್ಚು ಜನರು ಬರುವ ನಿರೀಕ್ಷೆಯಲ್ಲಿ ಸಫಾರಿ ಕೇಂದ್ರದ ಆವರಣದಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಯಿತು. ವಲಯ ಅರಣ್ಯಧಿಕಾರಿ ಸಿದ್ದರಾಜು ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಫಾರಿಯಲ್ಲಿ ಸರ್ಕಾರದ ನಿಯಮದಂತೆ ಪ್ರತಿ ಬಸ್‌ನಲ್ಲಿ ೧೩ ಜನರಂತೆ ೩೫ ಜನರಿಗೆ ಸಫಾರಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಫಾರಿ ಪ್ರಾರಂಭಕ್ಕೂ ಮೊದಲೇ ಸಫಾರಿ ಕೇಂದ್ರಕ್ಕೆ ತಹಶೀಲ್ದಾರ್ ಆರ್.ಮಂಜುನಾಥ್, ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮುಂಜಾಗೃತಾ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಲ್ಲದೇ ಪ್ರತಿ ಬಸ್‌ಗೂ ಸಫಾರಿ ಹೊರಡುವ ಮುನ್ನ ಸ್ಯಾನಿಟೈಸರ್ ಸಿಂಪಡಿಸಬೇಕು. ಸಫಾರಿ ಮುಗಿದ ನಂತರವು ಸಹ ಸ್ಯಾನಿಟೈಸರ್ ಸಿಂಪಡಿಸಬೇಕು ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗಳ ಯಾರೂ ಸಹ ಪ್ರವಾಸಿಗರೊಡನೆ ಸಂಪರ್ಕಕ್ಕೆ ಹೋಗಬಾರದು. ಸಿಬ್ಬಂದಿಗಳು ಮಾಸ್ಕ್ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದರು.
ನಂತರ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯಧಿಕಾರಿ ಸಿದ್ದರಾಜು ಸಿಬ್ಬಂದಿಗಳು ಆದಷ್ಟು ಪ್ರವಾಸಿಗರ ಸಂಪರ್ಕಕ್ಕೆ ಹೋಗದಂತೆ ಗಮನ ಹರಿಸಬೇಕು ಹಾಗೂ ಬಸ್ ನಲ್ಲಿರುವ ಪ್ರವಾಸಿಗರು ಎದ್ದು ಓಡಾಡದಂತೆ ನೋಡಿಕೊಳ್ಳಬೇಕು, ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಒಂದು ಸೂಕ್ಷ್ಮವಲಯ ಅಲ್ಲಿರುವ ಜೀವ ಸಂಕುಲಕ್ಕೆ ಯಾವುದೇ ತೊಂದರೆಯಾಗದoತೆ ನಾವು ಜಾಗೃತರಾಗಿ ಕೆಲಸ ನಿರ್ವಹಿಸಬೇಕು ಎಂದು ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss