Sunday, June 26, 2022

Latest Posts

ಮೂರು ಹೊಸ ಕಾಲೇಜುಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಅನುಮೋದನೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯು ೨೦೨೦-೨೧ನೆಯ ಸಾಲಿಗೆ ಮೂರು ನೂತನ ಕಾಲೇಜುಗಳಿಗೆ ಹೊಸ ಸಂಯೋಜನೆ ನೀಡಿದೆ.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಹೊಸ ಕಾಲೇಜುಗಳ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು.
ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಲಪಾಡ್ ಕಟ್ಟಡದಲ್ಲಿ ಎ ಆಂಡ್ ಎಂ ಎಜುಕೇಶನಲ್ ಟ್ರಸ್ಟ್ ವತಿಯಿಂದ ಎ ಆಂಡ್ ಎಂ ಎಜುಕೇಶನ್ ಕಾಲೇಜ್ ಆಫ್ ಕ್ರಿಯೇಟಿವಿಟಿ ಎಂಡ್ ಟೆಕ್ನಾಲಜಿ ಎಂಬ ಕಾಲೇಜು ಆರಂಭಗೊಳ್ಳಲಿದೆ. ಉರ್ವಸ್ಟೋರ್ ಮೆನೇಜಸ್ ಟವರ್‍ಸ್‌ನಲ್ಲಿ ಸ್ವಸ್ತಿಕಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ಶುರು ಆಗಲಿದೆ.
ಅದೇ ರೀತಿ ದೇರಳಕಟ್ಟೆ ಬಳಿಯ ನಾಟೆಕಲ್‌ನಲ್ಲಿ ಕುನಿಲ್ ಜಿ.ಪಿ. ಎಜುಕೇಶನ್ ಟ್ರಸ್ಟ್ ವತಿಯಿಂದ ಕುನಿಲ್ ಜಿ.ಪಿ ಕಾಲೇಜು ಶುಭಾರಂಭಗೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಮುಂದುವರಿಕಾ ಸಂಯೋಜನೆಯನ್ನು ಡೀಮ್ಡ್ ಆಗಿ ವಿಸ್ತರಿಸಲಾಗಿತ್ತು. ವಿಸ್ತರಣಾ ಸಂಯೋಜನೆಗೆ ಕೋರಿಕೆ ಸಲ್ಲಿಸಿದ ಕಾಲೇಜುಗಳಿಗೆ ಮಾತ್ರ ಸ್ಥಳೀಯ ಪರಿಶೀಲನಾ ಸಮಿತಿಯನ್ನು ಕಳುಹಿಸಿ ಕೊಟ್ಟು ವರದಿಗಳನ್ನು ಸಭೆ ಪರಿಗಣಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss