ಕೆಲವರಿಗೆ ಮೂಲಂಗಿ ಹಿಡಿಸೋದೆ ಇಲ್ಲ. ಇನ್ನು ಮೂಲಂಗಿ ಸೊಪ್ಪು ಅಂದರೆ ಮೂರು ಮುರಿತಾರೆ. ಆದರೆ ಮೂಲಂಗಿ ಸಪ್ಪಿನಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಮೂಲಂಗಿಯನ್ನು ಯಾವಾಗಲು ಸೊಪ್ಪು ಸಮೇತ ತನ್ನಿ. ಮೂಲಂಗಿ ಹಾಗೂ ಅದರ ಸೊಪ್ಪು ಎರಡರ ಪಲ್ಯವನ್ನೂ ಮಾಡಬಹುದು ಹೇಗೆ ನೋಡಿ..
ಬೇಕಾಗಿರುವ ಸಾಮಾಗ್ರಿಗಳು
- ಮೂಲಂಗಿ ಸೊಪ್ಪು
- ಈರುಳ್ಳಿ
- ಕಡ್ಲೆಬೇಳೆ
- ಉದ್ದಿನಬೇಳೆ
- ಒಣಮೆಣಸು
- ಖಾರದಪುಡಿ
- ಬೆಳ್ಳುಳ್ಳಿ
- ಸಾಂಬಾರ್ ಪುಡಿ
- ಉಪ್ಪು
ಮಾಡುವ ವಿಧಾನ - ಮೊದಲು ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
- ಬಾಣಲೆಗೆ ಎಣ್ಣೆ ಕೆಡಲೆಬೇಳೆ,ಉದ್ದಿನಬೇಳೆ,ಒಣಮೆಣಸು ಹಾಕಿ.
- ನಂತರ ಈರುಳ್ಳಿ,ಬೆಳ್ಳುಳ್ಳಿ ಹಾಕಿ ಬಾಡಿಸಿ.
- ಈರುಳ್ಳಿ ಬೆಂದಮೇಲೆ ಸೊಪ್ಪು ಹಾಕಿ.
- ಸೊಪ್ಪಿನಲ್ಲಿ ನೀರಿನಂಶ ಹೋಗುವವರೆಗೂ ಬಾಡಿಸಿ
- ಈಗ ಉಪ್ಪು,ಖಾರದ ಪುಡಿ,ಸಾಂಬಾರು ಪುಡಿ ಹಾಕಿ.
- 10 ನಿಮಿಷ ಬಾಡಿಸಿದರೆ ಮೂಲಂಗಿ ಸೊಪ್ಪಿನ ಪಲ್ಯ ರೆಡಿ