ಇತ್ತೀಚೆಗೆ ಮೂಲವ್ಯಾಧಿ ಮನೆಯಲ್ಲಿ ಒಬ್ಬರಿಗೆ ಇರುವ ರೋಗವಾಗಿ ಹೋಗಿದೆ. ಈ ಸಮಸ್ಯೆ ಇರುವವರ ಪಾಡೂ ಯಾರಿಗೂ ಬೇಡ. ಹೇಳಿಕೊಳ್ಳುವುದಕ್ಕೂ ಆಗುವುದಿಲ್ಲ, ಬಿಡುವುದಕ್ಕೂ ಆಗುವುದಿಲ್ಲ. ಆಪರೇಷನ್ ಮಾಡಿಸಿದರೂ ಕಡಿಮೆ ಆಗುವುದಿಲ್ಲ. ಬೆಳಿಗ್ಗೆ ಎದ್ದು ಟಾಯಲೇಟ್ಗೆ ಹೋಗುವುದೇ ದೊಡ್ಡ ಸಮಸ್ಯೆಯಾಗಿ ಹೋಗುತ್ತದೆ. ಹೋಗದೇ ಇರುವುದಕ್ಕೂ ಆಗುವುದಿಲ್ಲ. ಹೋದರೆ ನರಕವೇ ಸರಿ. ಮೂಲವ್ಯಾದಿ ಸಮಸ್ಯೆ ಇರುವವರು ಚಿಂತಿಸುವುದು ಬೇಡ ಸಾಕಷ್ಟು ಮನೆ ಮದ್ದು ಇವೆ. ಇವುಗಳನ್ನು ಟ್ರೈ ಮಾಡಿ.
- ಬೆಳಿಗ್ಗೆ ಎದ್ದ ತಕ್ಷಣ ಹಸಿದ ಹೊಟ್ಟೆಯಲ್ಲಿ ಲೋಳೆಸರದ ರಸಕ್ಕೆ ಹಸಿ ಹಾಲನ್ನು ಹಾಕಿ ಮಿಕ್ಸ್ ಮಾಡಿಕೊಂಡು ನಿತ್ಯ ಸೇವಿಸಬೇಕು. ಹೀಗೆ ವಾರ ಪೂರ್ತಿ ಮಾಡಿ. ಪರಿಣಾಮ ನಿಮಗೆ ಗೊತ್ತಾಗುತ್ತದೆ.
- ತೊಂಡೆ ಬಳ್ಳಿಯ ಸೊಪ್ಪನ್ನು ನೀರಿಗೆ ಹಾಕಿ ಕುದಿಸಿ ಅದಕ್ಕೆ ಬೆಣ್ಣೆ ಹಾಕಿಕೊಂಡು ದಿನದಲ್ಲಿ ಎರಡು ಬಾರೀ ಕುಡಿಯಿರಿ ಇದರಿಂದ ಬಹು ಬೇಗ ಮೂಲವ್ಯಾಧಿ ಕಡಿಮೆ ಆಗುತ್ತದೆ.
- ಮುಟ್ಟಿದರೆ ಮುನಿ ಸೊಪ್ಪು ( ನಾಚಿಕೆ ಮುಳ್ಳು) ನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿಕೊಳ್ಳಬೇಕು. ನಂತರ ನೀರಿಗೆ ಆ ಪುಡಿಯನ್ನು ಹಾಕಿ ಬತ್ತಿಸಿಕೊಂಡು ದಿನವೂ ರಾತ್ರಿ ಮಲಗುವಾಗ ಕುಡಿಯಬೇಕು.
- ಜೀರಿಗೆ, ಬೆಣೆ, ಮತ್ತು ಕೊತ್ತುಂಬರಿ ಬೀಜವನ್ನು ಹಾಕಿ ನೀರಿನಲ್ಲಿ ಕುದಿಸಿ ಹಸಿದ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ.
- ಈರುಳ್ಳಿಯನ್ನು ತುಪ್ಪದಲ್ಲಿ ಹುರಿದುಕೊಂಡು ಅದನ್ನು ಅನ್ನಕ್ಕೆ ಹಾಕಿಕೊಂಡು ಸೇವಿಸುವುದು.
- ನೆಲ್ಲಿಕಾಯಿಯನ್ನು ಕುಟ್ಟಿ ಪುಡಿಮಾಡಿ ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಳಗಿಸಬೇಕು. ನಂತರ ಅದರ ಪುಡಿಯನ್ನು ಮೊಸರಿನಲ್ಲಿ ಕಲಸಿಕೊಂಡು ಅನ್ನದ ಜೊತೆ ಸೇವಿಸಬೇಕು.
- ಆಕಳ ಹಸಿ ಹಾಲಿಗೆ ಲಿಂಬು ರಸವನ್ನು ಹಾಕಿಕೊಂಡು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಕುಡಿದರೆ ಬೇಗೆ ಮೂಲವ್ಯಾಧಿ ಕಡಿಮೆ ಆಗುತ್ತದೆ.