ಕಾಶ್ಮೀರ: ಇಲ್ಲಿನ ಕುಪ್ವಾರಾ ಜಿಲ್ಲೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಕಣಿವೆಯಲ್ಲಿ ಮಾದಕ ವಸ್ತು ಪೂರೈಕೆ ಮತ್ತು ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಈ ಮೂವರು ಎಲ್ಇಟಿ ಉಗ್ರರನ್ನು ಬಂಧಿಸಿವೆ.
ಬಂಧಿತರಿಂದ ಬಾರೀ ಪ್ರಮಾಣದ ಅಫೀಮು ಮತ್ತು ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ ಇಫ್ತಿಖರ್ ಇಂದ್ರಬಿ, ಈತನ ಅಳಿಯ ಮೊಮಿನ್ ಪೀರ್ ಹಾಗೂ ಇಕ್ಬಾಲ್-ಉಲ್-ಇಸ್ಲಾಂ ಎಂದು ಗುರುತಿಸಲಾಗಿದೆ. ಇವರು ತಮ್ಮ ಪಾಕಿಸ್ತಾನ ಹ್ಯಾಂಡ್ಲರ್ ಗಳೊಂದಿಗೆ ಸಂಪರ್ಕದಲ್ಲಿದ್ದರು. ಬಂಧಿತರಿಂದ 21 ಕೆಜಿ ಹೆರಾಯಿನ್, 1.34 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ವಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹಂದವಾರ ಡಾ ಜಿ.ವಿ ಸುಂದೀಪ್ ಚಕ್ರವರ್ತಿ ತಿಳಿಸಿದ್ದಾರೆ. ಅರೋಪಿಗಳ ಪೈಕಿ ಇಫ್ತಿಖರ್ ಇಂದ್ರಬಿ ಈತನ ವಿರುದ್ಧ ಹಲವಾರು ಎಫ್ಐಆರ್ ದಾಖಲಾಗಿದೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ನ ವಿಶೇಷ ತಂಡ ಮತ್ತು ಸಿಆರ್ಪಿಎಫ್ ಪಡೆಗಳು ಈ ಜಂಟಿ ಕಾರ್ಯಾಚರಣೆ ನಡೆಸಿದ್ದವು.