ಬಂಟ್ವಾಳ: ಕೊರೊನಾ ವೈರಸ್ನಿಂದ ಬಂಟ್ವಾಳ ಕಸ್ಬಾ ಗ್ರಾಮದ 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪರಿಸರವನ್ನು ಮುಂಜಾಗ್ರತೆ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದ್ದು,ಜನರು ಆತಂಕಿತರಾಗಿದ್ದಾರೆ. ಮೃತ ಮಹಿಳೆಯನ್ನು ಐದು ದಿನಗಳ ಹಿಂದೆ ತಪಾಸಣೆ ನಡೆಸಿದ ಬಂಟ್ವಾಳದ ವೈದ್ಯರೊಬ್ಬರನ್ನು ಭಾನುವಾರ ಸಂಜೆ ಕ್ವಾರಂಟೇನ್ ಗೆ ದಾಖಲಿಸಲಾಗಿದೆ.
ಬಂಟ್ವಾಳದಲ್ಲಿ ಎಲ್ಲ ಖಾಸಗಿ ಆಸ್ಪತ್ರೆ ಮುಚ್ಚಿದ್ದರೂ,ಈ ವೈದ್ಯರು ಮಾತ್ರ ಕ್ಲಿನಿಕ್ ಮತ್ತು ಮನೆಯಲ್ಲು ಸೇವೆ ನೀಡುತ್ತಿದ್ದರು. ಇದೀಗ ಅವರು ನೀಡಿರುವ ಸೇವೆಯಿಂದ ಕ್ವಾರೆಂಟೆನ್ ನಲ್ಲಿರುವಂತಾಗಿದೆ. ಈ ವೈದ್ಯರು ಲಾಕ್ ಡೌನ್ ಆರಂಭವಾದಾಗಲೇ ಪ್ರಧಾನಿ ಮೋದಿಯವರ ನೀಡಿರುವ ಕರೆಯನ್ನು ಪಾಲಿಸಿ, ಎಚ್ಚರಿಕೆಯಿಂದ ಇರುವಂತೆ ತಮ್ಮ ಮನೆ ಮುಂದೆ ಬ್ಯಾನರ್ ಕೂಡ ಅಳವಡಿಸಿ ಎಲ್ಲ ವೈದ್ಯರಿಗೆ ಮಾದರಿಯಾಗಿದ್ದರು.