ಮೆಂತ್ಯೆ ತಿನ್ನಲು ಕಹಿ ಆದರೆ ಆರೋಗ್ಯಕ್ಕೆ ಸಿಹಿ: ಮೆಂತ್ಯೆಯ ಮಹಾ ಲಕ್ಷಣಗಳನ್ನು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ..

0
109

ಎಲ್ಲ ತರಕಾರಿ, ಕಾಳು ಬೇಳೆ ತಿನ್ನುವ ನಮಗೆ ಮೆಂತ್ಯೆ ಎಂದರೆ ಆಗದು, ಕಹಿ ಎಂದು ಮೂಗು ಮುರಿಯುತ್ತೇವೆ. ನೇರವಾಗಿ ಸೇವಿಸಲಾಗದೇ ದೋಸೆ, ಮುದ್ದೆ ಹೀಗೆ ಮರೆಮಾಚಿ ತಿನ್ನುತ್ತೇವೆ. ಮೆಂತ್ಯೆಯ ಕಹಿ ಹಿಂದೆ ಎಷ್ಟೆಲ್ಲಾ ಆರೋಗ್ಯಕರ ವಿಷಯಗಳಿವೆ ನಿಮಗೆ ತಿಳಿದಿದೆಯೇ? ಮೆಂತ್ಯೆ ಗುಣಗಳ ಬಗ್ಗೆ ತಿಳಿದ ಮೇಲೆ ನಿಮ್ಮ ಆಹಾರದಲ್ಲಿ ಖಂಡಿತಾ ಮೆಂತೆಗೆ ಅಗ್ರಸ್ಥಾನ ನೀಡುತ್ತೀರಿ.. ಅದು ಹೇಗೆ ಎನ್ನುತ್ತೀರಾ ಇಲ್ಲಿ ನೋಡಿ..

  • ಮೆಂತ್ಯೆ ತಿನ್ನುವುದರಿಂದ ಬಾಣಂತಿಯರಲ್ಲಿ ಹಾಲು ಉತ್ಪಾದನೆ ಹೆಚ್ಚಾಗುತ್ತದೆ. ಈಗಿನ ಆರೋಗ್ಯ ಶೈಲಿಗೆ ಹಾಲಿನ ಕೊರತೆ ಹೆಚ್ಚಿರುತ್ತದೆ. ಆದರೆ ನಿತ್ಯವೂಮೆಂತ್ಯೆ ಸೇವನೆಯಿಂದ ಹಾಲು ಹೆಚ್ಚಾಗುತ್ತದೆ.
  • ದೇಹದಲ್ಲಿ ಸಕ್ಕರೆ ಅಂಶದ ಸಮತೋಲನ ಕಾಯ್ದುಕೊಳ್ಳುವ ಕೆಲಸ ಮೆಂತ್ಯೆ  ಮಾಡುತ್ತದೆ. ನೀವು ಡಯಾಬಿಟೀಸ್ ರೋಗಿಯಾಗಿದ್ದರೆ ಮೆಂತ್ಯೆ ಪ್ರತಿದಿನ ಸೇವಿಸಿ. ಇದು ನಿಮ್ಮ ದೇಹದ ಇನ್ಸುಲಿನ್ ಲೆವೆಲ್ ಕಂಟ್ರೋಲ್ ಮಾಡುತ್ತದೆ. ಇನ್ನು ಡಯಾಬಿಟೀಸ್ ಬರುವುದು ಬೇಡ ಎನ್ನುವವರೂ ಮೆಂತ್ಯೆ ಬಳಸಿ.
  • ಅಡುಗೆ ಮಾಡುವಾಗ ಸುಟ್ಟುಕೊಂಡರೆ ಅಥವಾ ತರಕಾರಿ ಹೆಚ್ಚುತ್ತಾ ಕೈಗೆ ಪೆಟ್ಟು ಮಾಡಿಕೊಂಡರೆ ಮೆಂತ್ಯೆ  ಪುಡಿ ಮಾಡಿ ಹಚ್ಚಿಕೊಳ್ಳಿ. ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಮೆಂತ್ಯೆ ಹಚ್ಚುವುದರಿಂದ ತಕ್ಷಣ ತಣ್ಣಗಾಗುತ್ತದೆ.
  • ನಿಮ್ಮ ದೇಹದ ಉಷ್ಣತೆ ಯಾವಾಗಲೂ ಹೆಚ್ಚಿದ್ದರೆ ಮೆಂತ್ಯೆ  ಸೇವಿಸಿ. ಇದು ತಂಪು ನಿಮ್ಮ ದೇಹ ತಂಪಾಗಿಡಲು ಇದು ಸಹಕರಿಸುತ್ತದೆ. ಮೆಂತ್ಯೆ ಕಡುಬು, ಮೆಂತ್ಯೆ ಮುದ್ದೆ,ಮೆಂತ್ಯೆ  ದೋಸೆ, ಮೆಂತ್ಯೆ ಚತ್ನಿ ಹೀಗೆ ಹತ್ತು ಹಲವಾರು ರೂಪಗಳ್ಲಿ ಮೆಂತ್ಯೆ  ಸೇವಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.
  • ಇನ್ನು ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಮೆಂತ್ಯೆ  ಸಹಕಾರಿ. ಜೀರ್ಣಕ್ರಿಯೆ ಸಮಸ್ಯೆಗಳಿಗೂ ಮೆಂತ್ಯೆ ರಾಮಬಾಣ. ಅಷ್ಟೇ ಅಲ್ಲ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವನ್ನು ಓಡಿಸಲು ಮೆಂತ್ಯೆ  ಸಹಕರಿಸುತ್ತದೆ.

LEAVE A REPLY

Please enter your comment!
Please enter your name here