Monday, August 15, 2022

Latest Posts

ಮೆಗಾಸ್ಟಾರನ್ನೂ ಬಿಡದ ಕೊರೋನಾ: ಚಿರಂಜೀವಿಗೆ ಪಾಸಿಟಿವ್

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿದ್ದಾರೆ. ಈ ಕುರಿತು ಚಿರಂಜೀವಿ ಅವರು ಟ್ವೀಟ್ ಮಾಡಿದ್ದು, ಆಚಾರ್ಯ ಸಿನಿಮಾದ ಶೂಟಿಂಗ್ ಮುನ್ನ ಕೊರೋನಾ ಪರೀಕ್ಷೆ ಮಾಡಿಸಲಾಯಿತು.
ನನಗೆ ಯಾವ ರೋಗ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ. ಹೀಗಾಗಿ ಸ್ವಯಂ ಐಸೋಲೇಟ್ ಆಗಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಜೊತೆ ಕಳೆದ ಐದು ದಿನಗಳಿಂದ ಸಂಪರ್ಕದಲ್ಲಿ ಇರುವವರೆಲ್ಲರೂ ಕೊರೋನಾ ಪರೀಕ್ಷೆಗೆ ಒಳಪಡಿ. ಈಗ ನಾನು ಆರೋಗ್ಯವಾಗಿದ್ದೇನೆ. ಮುಂದೆ ನನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss