Monday, August 8, 2022

Latest Posts

ಮೆಗಾಸ್ಟಾರ್ ಚಿರಂಜೀವಿಗೆ ಕೊರೋನಾ ಇರಲೇ ಇಲ್ಲ! ಹಾಗಿದ್ದರೆ ನಡೆದದ್ದೇನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮೆಗಾಸ್ಟಾರ್ ಚಿರಂಜೀವಿ ಕೊರೋನಾ ಹಿನ್ನೆಲೆ ಹೋಂ ಕ್ವಾರೆಂಟೀನ್ ಆಗಿದ್ದು, ಇದೀಗ ಚಿರಂಜೀವಿಗೆ ಕೊರೋನಾ ಇರಲೇ ಇಲ್ಲ ಎನ್ನುವ ಅಂಶ  ಹೊರಬಿದ್ದಿದೆ.
ಮೂರು ವಿಧವಾದ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, ಕೊರೋನಾ ವರದಿ ನೆಗೆಟಿವ್ ಬಂದಿದೆ.
ಈ ಕುರಿತು ಚಿರಂಜೀವಿ ಅವರೇ ಟ್ವೀಟ್ ಮಾಡಿದ್ದು, ನನಗೆ ಮೂರು ರೀತಿಯಾ ಕೊರೋನಾ ಪರೀಕ್ಷೆ ಮಾಡಿದ್ದಾರೆ. ಎಲ್ಲವೂ ನೆಗೆಟಿವ್ ಬಂದಿದೆ. ಈ ಹಿಂದೆ ಪರೀಕ್ಷೆ ಮಾಡಿಸಿದ ಆರ್‌ಟಿಪಿಸಿಆರ್ ಕಿಟ್‌ನಲ್ಲಿ ತೊಂದರೆ ಇತ್ತು. ಹಾಗಾಗಿ ಪಾಸಿಟಿವ್ ಬಂದಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss