ಜೋರಾಗಿ ಮೆಟ್ಟಿಲು ಹತ್ತಿದಾಗ ಅಥವಾ ವಸ್ತುಗಳನ್ನು ಎತ್ತಿ ಇನ್ನೊಂದೆಡೆ ಇಟ್ಟಾಗ ಉಸಿರಾಡಲು ಕಷ್ಟವಾಗುತ್ತದೆ. ಧೂಳಿನಲ್ಲಿ ಕೆಲಸ ಮಾಡಿದರೆ ಉಸಿರಾಡಲು ಕಷ್ಟವಾಗುತ್ತದೆ. ಇನ್ನು ಗೆಳೆಯೊಡನೆ ಸೈಕ್ಲಿಂಗ್ ಮಾಡಿದಾಗಲೂ ಹೀಗೆ ಅನಿಸುತ್ತದೆ. ಇನ್ನು ಕೆಲವರಿಗೆ ಯಾವುಯದಾದರೂ ವಿಷಯ ಮಾನಸಿಕವಾಗಿ ತಾಗಿದರೆ ಒಂದು ಕ್ಷಣ ಸಫೋಕೇಟ್ ಆಗುತ್ತೇವೆ. ಇದು ಸಾಮಾನ್ಯ. ಈ ರೀತಿ ಆದಾಗ ಮನೆಯಲ್ಲೇ ಏನು ಮಾಡಬಹುದು? ತೀರ ಕಷ್ಟವೆನಿಸಿದರೆ ವೈದ್ಯರ ಭೇಟಿ ಮಾಡಬಹುದು. ಇಲ್ಲವಾದರೆ ನಾವು ಹೇಳುವ ಟಿಪ್ಸ್ಗಳನ್ನು ಫಾಲೋ ಮಾಡಿ..
- ವಿಷಲ್ ಹೊಡೆಯುವ ರೀತಿ ಉಸಿರಾಡಿ: ನೀವು ವಿಷಲ್ ಹೊಡೆಯಲು ಅಥವಾ ಪೌಟ್ ಮಾಡಲು ಬಳಸುವ ರೀತಿ ತುಟಿ ಮಾಡಿಕೊಂಡು ಉಸಿರಾಡಿ. ಹೀಗೆ ಹತ್ತು ಬಾರಿ ಮಾಡುವುದರೊಳಗೆ ನಿಮ್ಮ ಉಸಿರಾಟ ಹತೋಟಿಗೆ ಸಿಗುತ್ತದೆ.
- ನೇರವಾಗಿ ಕುಳಿತುಕೊಳ್ಳಿ: ನಿಂತು ಅಥವಾ ಮಲಗಿ ಉಸಿರಾಡಲು ಆಗದಿದ್ದರೆ, ನೇರವಾಗಿ ಚೇರ್ಮೇಲೆ ಕುಳಿತು ಉಸಿರಾಡಿ. ನೆಲಕ್ಕೆ ನಿಮ್ಮ ಕಾಲು ತಾಗಿಸಿ, ತೊಡೆಗಳ ಮೇಲೆ ಕೈ ಇಟ್ಟುಕೊಂಡು ಕುಳಿತು ಉಸಿರಾಡಿ. ಸ್ವಲ್ಪ ಹೊತ್ತಿಗೆ ಉಸಿರಾಟ ಸರಿಯಾಗುತ್ತದೆ.
- ಗೋಡೆಗೆ ಬಾಗಿ ಉಸಿರಾಡಿ: ಕುಳಿತು ಉಸಿರಾಡಲು ಕಷ್ಟವಾದರೆ, ಗೋಡೆಗೆ ನಿಮ್ಮ ಬೆನ್ನುತಾಗಿಸಿ ಉಸಿರಾಡಿ. ಇದರಿಂದ ಎಲ್ಲವೂ ರಿಲಾಕ್ಸ್ ಆಗುತ್ತದೆ.
- ಫ್ಯಾನ್ ಹಾಕಿ: ಸಂಶೋಧನೆ ಪ್ರಕಾರ ಫ್ಯಾನ್ ಗಾಳಿ ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ. ತಣ್ಣನೆ ಗಾಳಿ ಬಂದ ನಂತರ ನಿಮಗೆ ಉಸಿರಾಡಲು ಸುಲಭ ಎನಿಸುತ್ತದೆ.
- ಕಾಫಿ ರಾಮಬಾಣ: ಅಸ್ತಮಾ ಇದ್ದವರು ಕಾಫಿ ಕುಡಿಯುವುದನ್ನು ಮರೆಯಬೇಡಿ. ಉಸಿರಾಟಕ್ಕೆ ತೊಂದರೆ ಎನಿಸಿದಾಗ ಕಾಫಿ ಕುಡಿದರೆ, ಇದರ ಕೆಫಿನ್ ಅಂಶ ಮಸಲ್ಗಳನ್ನು ರಿಲ್ಯಾಕ್ಸ್ ಮಾಡುತ್ತದೆ. ಆಗ ಉಸಿರಾಟ ಸುಲಭವಾಗುತ್ತದೆ.