Saturday, June 25, 2022

Latest Posts

ಮೆಡಿಕಲ್ ಸ್ಟೋರಿನ ಬೀಗ ಒಡೆದು ಹಣ ದೋಚಿದ ಮೂವರು ಆರೋಪಿಗಳ ಸೆರೆ

ಹೊಸ ದಿಗಂತ ವರದಿ, ತುಮಕೂರು:

ಯಲ್ಲಾಪುರದ ಮಾತೃಶ್ರೀ ಮೆಡಿಕಲ್ಸ್ ಬೀಗ ಒಡೆದ 3,20,087ರೂಗಳನ್ನು ಕಳವು ಮಾಡಿದ್ದ ಮೂವರನ್ನು ಬಂದಿಸಿದ್ದಾರೆ ಹಣವಶಪಡಿಸಿಕೊಳ್ಳುವಲ್ಲಿ ತುಮಕೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ನವೆಂಬರ್ 20ರಂದು ರಾತ್ರಿ ಮೆಡಿಕಲ್ ಸ್ಟೋರಿನ ಬೀಗ ಒಡೆದು ಕಳ್ಳ ತನಮಾಡಿದ ಪ್ರಕರಣ ನಡೆದಿತ್ತು. ಈ ಹಣ ಯಲ್ಲಾಪುರದ ವರ್ತಕರಿಗೆ ಸೌಹಾರ್ದ ಪತ್ತಿನ ಸಹಕಾರ ಸಂಘಕ್ಕೆ ಸೇರಿದ್ದು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸಿಪಿಐ ರಾಮಕೃಷ್ಣಯ್ಯ ನೇತೃತ್ವದ ಪೊಲೀಸರು ನವೆಂಬರ್ 25ರಂದು ಯಲ್ಲಪ್ಪ (19),ಸುದೀಪ ಎಸ್(20) ಮತ್ತು ರಾಮಯ್ಯ (20)ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪತ್ತೆಯಾಗಿದೆ.
ಬಂಧಿತರಿಂದ ಗ್ರಾಮಾಂತರ ಠಾಣೆಯಲ್ಲೂ ವ ್ಯಾಪ್ತಿಯಲ್ಲಿನ ಮೂರು ಕಳವು ಪ್ರಕರಣಗಳು ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಪ್ರಕರಣ
ಪತ್ತೆಯಾಗಿದೆ.
ಅವರಿಂದ 2,33,820ರೂಗಳ ನಗದು,1,50,000ರೂಗಳು ಮೌಲ್ಯದ ಕೆ.ಎ.06-ಎಎ-6995ಸಂಖ್ಯೆಯ ಆಟೊ ರಿಕ್ಷಾ, 10 ಸಾವಿರ ಮೌಲ್ಯದ ವಿಪೊ ಮೊಬೈಲ್, 6500ಮೌಲ್ಯದ ಐಟೆಲ್ ಮೊಬೈಲ್ ಸೇರಿ 4ಲಕ್ಷರೂಗಳ ಮೌಲ್ಯದ ಕಳವು ಮಾಲೆಯನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss