Tuesday, June 28, 2022

Latest Posts

ಮೆಣಸಿನಕಾಯಿ, ಹತ್ತಿ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದ ಚಾಲಾಕಿಗಳು!

ಹೊಸ ದಿಗಂತ ವರದಿ, ಬಳ್ಳಾರಿ:

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಂ.ಗುಂಡ್ಲಹಳ್ಳಿ- ಬಸಾಪುರ ಗ್ರಾಮದ ಬಳಿ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಯ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಸುಮಾರು 7.20 ಲಕ್ಷ ರೂ.ಗಳ ಮೌಲ್ಯದ ಗಾಂಜಾ ಗಿಡಗಳನ್ನು ಸಂಡೂರಿನ ಅಬಕಾರಿ ನಿರೀಕ್ಷಕರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಹೊಸಪೇಟೆ ವಿಭಾಗದ ಅಬಕಾರಿ ಇಲಾಖೆ ಜಂಟಿ ಆಯುಕ್ತರ ಸೂಚನೆ ಮೇರೆಗೆ ಸಂಡೂರಿನ ಅಬಕಾರಿ ನಿರೀಕ್ಷಕರಾದ ಸಿ.ಜ್ಯೋತಿನಾಯ್ಕ ಅವರ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ‌ ನಡೆಸಿದೆ. ರೈತರಾದ ದೇವಣ್ಣ ಮತ್ತು ಬಾಲಯ್ಯ ಎಂಬುವರ ಹೊಲಗಳಲ್ಲಿ ಬೆಳೆದಿದ್ದ ಅಕ್ರಮ ಗಾಂಜಾ ಬೆಳೆಯನ್ನ ವಶಕ್ಕೆ ಪಡೆದಿದ್ದಾರೆ. ಸುಮಾರು 31 ಗಾಂಜಾ ಗಿಡಗಳನ್ನು ಬೆಳೆದಿದ್ದು, ಒಟ್ಟು 49 ಕೆಜಿ 240 ಗ್ರಾಂ.ನಷ್ಟು ಬೆಳೆಯನ್ನು ಸೀಜ್ ಮಾಡಲಾಗಿದೆ. ಜಮೀನಿನ ಮೂಲ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿತರು ಪರಾರಿಯಾಗಿದ್ದಾರೆ. ಅವರ ಪತ್ತೆ ಕಾರ್ಯವನ್ನ ನಡೆಸಲಾಗುತ್ತಿದೆ ಎಂದು ಅಬಕಾರಿ ನಿರೀಕ್ಷಕಿ ಜ್ಯೋತಿ ಸಿ.ನಾಯ್ಕ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss