Tuesday, June 28, 2022

Latest Posts

ಮೆಸೇಜ್ ಮಾಡುವ ಮುನ್ನ ಇಷ್ಟೊಂದು ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕಾ? ಯಾವುದು ಈ ಮೆಸೇಜ್ ಮ್ಯಾನರ್ಸ್?

ಪ್ರತಿದಿನ ಎಲ್ಲರೂ ಮೆಸೇಜ್ ಮಾಡುತ್ತೇವೆ. ಮುಖ್ಯವಲ್ಲದ ವಿಷಯದಿಂದ ಅತೀ ಮುಖ್ಯವಾದ ವಿಷಯವನ್ನು ಮೆಸೇಜ್‌ನಲ್ಲಿ ಸಂವಹನ ನಡೆಸುತ್ತೇವೆ. ಹಲವರಿಗೆ ಕಾಲ್‌ಗಿಂತ ಮೆಸೇಜ್ ಕಂಫರ್ಟಬಲ್. ವಾಟ್ಸಾಪ್ ಇಲ್ಲದ ಸಮಯದಲ್ಲಿ ದಿನಕ್ಕೆ ಸಿಗುವ ನೂರು ಮೆಸೇಜ್‌ಗಳನ್ನು ಕ್ಷಣಮಾತ್ರದಲ್ಲಿ ಮುಗಿಸುತ್ತಿದ್ದೆವು. ಈಗ ಹಾಗಿಲ್ಲ. ವಾಟ್ಸಾಪ್‌ನಲ್ಲಿ ದಿನಕ್ಕೆ ಮಾಡುವ ಮೆಸೇಜ್‌ಗಳಿಗೆ ಲೆಕ್ಕವೇ ಇಲ್ಲ. ಇನ್ನು ಕೆಲವೊಬ್ಬರು ಲೇಟಾಗಿ ರಿಪ್ಲೇ ಮಾಡುತ್ತಾರೆ ಎಂದು ಕೋಪ ಮಾಡಿಕೊಳ್ಳುವುದು ಉಂಟು. ಜನರೇ ಮಾಡಿಕೊಂಡಿರುವ ಮೆಸೇಜಿಂಗ್ ರೂಲ್ಸ್ ಬಗ್ಗೆ ನಿಮಗೆ ಗೊತ್ತೇ? ಹೀಗಿದೆ ನೋಡಿ..

  • ತಕ್ಷಣ ರಿಪ್ಲೇ ಬರದಿದ್ದರೂ ಪರವಾಗಿಲ್ಲ: ಕೆಲವೊಬ್ಬರಿಗೆ ತಾವು ಮೆಸೇಜ್ ಮಾಡಿದ ತಕ್ಷಣ ರಿಪ್ಲೇ ಬಂದುಬಿಡಬೇಕು. ಇಲ್ಲವಾದರೆ ಮೆಸೇಜ್ ಡಿಲೀಟ್ ಮಾಡುವುದು ಅಥವಾ ಸಿಟ್ಟುಮಾಡಿಕೊಳ್ಳುವುದು ಮಾಡುತ್ತಾರೆ. ಆದರೆ ಇದು ಹಾಗಲ್ಲ. ನಿಮ್ಮ ಮೆಸೇಜ್‌ಗೆ ರಿಪ್ಲೇ ಬಂದಿಲ್ಲ ಎಂದರೆ ಬ್ಯುಸಿ ಇರಬಹುದು. ಫೋನ್ ನೋಡಿಲ್ಲ ಆಗಿರಬಹುದು. ಸ್ವಲ್ಪ ತಾಳ್ಮೆ ಇರಲಿ.
  • ಮೆಸೇಜ್ ನೋಡಿ ಸುಮ್ಮನಾಗಬೇಡಿ: ಯಾರ ಮೆಸೇಜ್‌ಗಳಿಗೂ ರಿಪ್ಲೇ ಮಾಡದೇ ಇರಬೇಡಿ. ನಿಧಾನವಾದರೂ ಪರವಾಗಿಲ್ಲ. ಯಾರಿಗೆ ಯಾವ ಸಮಯದಲ್ಲಿ ಯಾರ ಸಹಾಯ ಬೇಕಾಗುತ್ತದೋ ತಿಳಿಯುವುದಿಲ್ಲ.
  • ಅವರ ದಿನಚರಿ ಗಮನದಲ್ಲಿರಲಿ: ನೀವು ಬೇಗ ಮಲಗಿ ಬೇಗ ಏಳುತ್ತೀರಿ. ಆದರೆ ಅವರು ಲೇಟಾಗಿ ಮಲಗಿ ಲೇಟಾಗಿ ಏಳುತ್ತಾರೆ. ನೀವು ಬೆಳಗ್ಗೆ ಏಳು ಗಂಟೆಗೆ ಮೆಸೇಜ್ ಮಾಡಿ ರಿಪ್ಲೇಗಾಗಿ ಕಾಯಬೇಡಿ. ಅಥವಾ ಅವರಿಗೆ ಆಫೀಸಿನಲ್ಲಿ ಒಂದು ಸಮಯಕ್ಕೆ ಮೀಟಿಂಗ್ ಇದ್ದರೆ ಆ ಸಮಯ ಮೆಸೇಜ್ ಮಾಡಬೇಡಿ.
  • ಉದ್ದುದ್ದ ಮೆಸೇಜುಗಳು ಬೇಡ: ಕೆಲವರಿಗೆ ಕಾದಂಬರಿ ರೀತಿಯಲ್ಲಿ ಉದ್ದುದ್ದ ಮೆಸೇಜ್ ಮಾಡುವ ಅಭ್ಯಾಸ ಇರುತ್ತದೆ. ಇದು ಬೇಡ. ಕೆಲವರಿಗೆ ಅಷ್ಟೆಲ್ಲಾ ಓದುವ ತಾಳ್ಮೆ ಇರುವುದಿಲ್ಲ. ಇದರಿಂದ ನೀವು ನಿರೀಕ್ಷಿಸಿದ ರಿಪ್ಲೇ ನಿಮಗೆ ದೊರೆಯದೇ ಇರಬಹುದು.
  • ಮೆಸೇಜ್‌ನಲ್ಲಿ ಕಾಲ್ ಮಾಡಬಹುದಾ ಕೇಳಿ: ಕಾಲ್ ಮಾಡುವ ಮುನ್ನ ಮೆಸೇಜ್ ಹಾಕಿ ನಿಮಗೆ ಕಾಲ್ ಮಾಡುಬಹುದಾ ಕೇಳಿ? ಅವರು ಫ್ರೀ ಆಗಿದ್ದರೆ ಮೆಸೇಜ್ ನೋಡಿರುತ್ತಾರೆ. ಆಗ ನೀವು ಕರೆ ಮಾಡಬಹುದು. ಸಡನ್ ಆಗಿ ಕರೆ ಮಾಡದಿರಿ.
  • ವ್ಯಂಗ್ಯ ಬೇಡ: ಮೆಸೇಜ್‌ನಲ್ಲಿ ನಿಮ್ಮ ಮಾತಿನ ಟೋನ್ ಅರ್ಥವಾಗುವುದಿಲ್ಲ. ಏನು? ಈ ಸಣ್ಣ ಪದವನ್ನು ಮೂರು ನಾಕು ತರ ಓದಬಹುದು. ನೀವು ಒಂದು ಭಾವನೆಯಲ್ಲಿ ಕಳಿಸಿದ್ದರೆ, ಅವರು ಒಂದು ಭಾವನೆಯಲ್ಲಿ ಓದುತ್ತಾರೆ. ಇದಲ್ಲಿ ತಮಾಷೆ, ವ್ಯಂಗ್ಯ ಬೇಡ. ಅರ್ಥ ಆಗದೇ ಇರಬಹುದು.
  • ಸ್ಪೆಲ್ಲಿಂಗ್ ಮಿಸ್ಟೇಕ್ ಬೇಡ: ನೀವು ಟೈಪ್ ಮಾಡಿದ ಮೇಲೆ ನಿಮ್ಮ ಮೆಸೇಜ್ ನೀವೇ ಓದಿ. ಎಲ್ಲಾದರೂ ಸ್ಪೆಲ್ಲಿಂಗ್ ಮಿಸ್ಟೇಕ್ ಕಂಡುಬಂದರೆ ಅದನ್ನು ಸರಿಪಡಿಸಿ ಕಳಿಸಿ. ಆಟೋಚೆಕ್ ಇರಲಿ.
  • ಎಮೋಜಿಗಳ ಸರಿ ಬಳಕೆ ಮಾಡಿ: ಸುಮ್ಮನೆ ಪ್ರತಿ ಮೆಸೇಜ್‌ಗಳಿಗೂ ಈಮೋಜಿ ಬಳಸಬೇಡಿ. ಬಳಸಿದರೂ ಹೊಂದಾಣಿಕಯಾಗುವಂಥದ್ದನ್ನು ಬಳಸಿ. ಬಳಸುವ ಮುನ್ನ ಅದರ ಸರಿ ಅರ್ಥ ತಿಳಿದುಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss